ಶ್ರೀ ವಿಜಯಲಕ್ಷ್ಮೀ ಸಹಕಾರಿಗೆ 46.71 ಲಕ್ಷ ರೂ. ಲಾಭ

3
Published on

ಬೋರಗಾಂವ: ಶ್ರೀ ವಿಜಯಲಕ್ಷ್ಮೀ ಕ್ರೆಡಿಟ್ ಸೊಸೈಟಿ ಆರ್ಥಿಕ ವರ್ಷದಲ್ಲಿ 46.71 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ನಿಂಗಪ್ಪ ಮುಧಾಳೆ ಹೇಳಿದರು.

ಸಮೀಪದ ಜನವಾಡ ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ 29ನೇ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿ, ಸಂಸ್ಥಾಪಕ ಅಧ್ಯಕ್ಷ ಅಣ್ಣಾಸಾಹೇಬ ಚೌಗುಲೆ, ಸಂಸ್ಥಾಪಕ ನಿರ್ದೇಶಕ ಶಂಕರ ಮುಧಾಳೆ, ನಿವೃತ್ತಿ ಶೆಂಡಗೆ, ಭೀಮು ಪಾಟೀಲ, ಸದಾಶಿವ ಮೆಸ್ತ್ರಿ ಅವರ ಮಾರ್ಗದರ್ಶನದಲ್ಲಿ ಪ್ರಗತಿಯತ್ತ ಸಾಗಿದೆ.ಸೊಸೈಟಿ 1,745 ಸದಸ್ಯರನ್ನು ಹೊಂದಿದ್ದು, 83.45 ಲಕ್ಷ ರೂ. ಷೇರು ಬಂಡವಾಳ, 3.46 ಕೋಟಿ ರೂ. ನಿಧಿ, 16.56 ಕೋಟಿ ರೂ. ಠೇವಣಿ 8.50 ಕೋಟಿ ರೂ. ಹೂಡಿಕೆ ಹೊಂದಿದೆ ಎಂದರು.

ಬಾಪುಸೋ ನೋರ್ಜೆ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಪುಂಡಲೀಕ ಖಾಪರೆ, ಉಪಾಧ್ಯಕ್ಷ ಸ್ವಪ್ನಿಲ್ ಪಾಟೀಲ, ನಿರ್ದೇಶಕರಾದ ಸನಾತನ ಮಗದುಮ್, ಪಿರಗೊಂಡ ಚೌಗುಲೆ, ನಾರಾಯಣ ಹಿರವೆ, ದತ್ತಾತ್ರೇಯ ಮಡಿವಾಳ, ಸುಭಾಷ ಪಾಟೀಲ, ವಿಜಯ ಪವಾರ, ವಿಜಯ ಹಂಡೆ, ಶ್ರೀಕಾಂತ ಶಾಂಡಗೆ, ತಿಪ್ಪಣ್ಣ ಪೂಜಾರಿ, ಅರುಣ ಮೇಸ್ತ್ರಿ, ಸುನೀತಾ ಮಗದುಮ, ಸುಮನ ಖೋತ, ಶೀತಲ ಲಡಗೆ, ಮಲ್ಲು ಮುಧಾಳೆ, ರಮೇಶ ಚೌಗುಲೆ, ಬಾಳಸಾಹೇಬ ಧರ್ಮಾಧಿಕಾರಿ ಇತರರಿದ್ದರು. ಶ್ರೀಕಾಂತ ಶಾಂಡಗೆ ಸ್ವಾಗತಿಸಿದರು. ಲೇಮನ ಮುಧಾಳೆ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net