ಬೆಳಗಾವಿ: ಜಿಲೆಯಲ್ಲಿ ಒಟ್ಟು 12 ಪ್ರಕರಣಗಳಲ್ಲಿ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ವಶಪಡಿಸಿಕೊಳ್ಳಲಾಗಿದ್ದ 455ಕೆಜಿ 582ಗ್ರಾಂ ಮಾದಕ ವಸ್ತುವನ್ನು ಜಿಲ್ಲಾ ಪೊಲೀಸರು ಏಕಕಾಲಕ್ಕೆ ವಿಲೇವಾರಿ ಮಾಡಿದ್ದಾರೆ.
ಅಕ್ರಮವಾಗಿ ಸಾಗಾಟ, ಮಾರಾಟ ಮಾಡುವಾಗಿನ ಮಾದಕ ವಸ್ತು ಹಾಗೂ ಗಾಂಜಾ ಬೆಳೆದಿದ್ದ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾಗಿದ್ದನ್ನು ನ್ಯಾಯಾಲಯ ಹಾಗೂ ಮಾಲಿನ್ಯ ನಿಯಂತ್ರಣಾಧಿಕಾರಿಗಳ ಅನುಮತಿ ಮೇರೆಗೆ ಸವದತ್ತಿ ತಾಲೂಕಿನ ಮರಗೋಡ ಠಾಣೆ ವ್ಯಾಪ್ತಿಯ ಹಾರುಗೊಪ್ಪ ಗ್ರಾಮದ ಬೆಳಗಾಂ ಗ್ರೀನ್ ಎನ್ವಿರಾನ್‌ಮೆಂಟಲ್ ಮ್ಯಾನೇಜಮೆಂಟ್ ಸಂಸ್ಥೆಯಲ್ಲಿ ನಿಯಮಾನುಸಾರವಾಗಿ ನಿಷ್ಕ್ರೀಯಗೊಳಿಸಲಾಗಿದೆ ಎಂದು ಎಸ್ಪಿ ಡಾ. ಭೀಮಾಶಂಕರ ಗುಳೇದ ಮಾಹಿತಿ ನೀಡಿದ್ದಾರೆ.
-----