450 ಸಸಿಕೊಟ್ಟು ಸಂಭ್ರಮ ಆಚರಣೆ

Pahare
Published on

ಕಾರವಾರ: ತಾಪಮಾನ ಏರಿಕೆಯನ್ನು ತಡೆಗಟ್ಟಲು ಗಿಡ ನೆಡುವುದು ಅನಿವಾರ್ಯ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಹೇಳಿದರು.
ನಗರದಲ್ಲಿ ಪ್ರತಿ ಶನಿವಾರ ಸ್ವಚ್ಛತೆಯಲ್ಲಿ ತೊಡಗಿದ ಪಹರೆ ವೇದಿಕೆಯ ಕಾರ್ಯ 450 ನೇ ವಾರಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ಸ್ವಚ್ಛತೆಯ ನಡಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತಮಾಡಿದರು.

ಗಿಡಗಳು ಮಣ್ಣಿನ ಸವಕಳಿ ತಡೆಗಟ್ಟುವುದು ಮಾತ್ರವಲ್ಲ ಮಳೆ ಬರಲು ಕಾರಣವಾಗುತ್ತವೆ. ಉತ್ತರ ಕನ್ನಡದಲ್ಲಿ  ಸಾಕಷ್ಟು ಅರಣ್ಯ ಇದ್ದರೂ, ಮತ್ತಷ್ಟು ಬೆಳೆಸಿ ಅದನ್ನು ಉಳಿಸಿಕೊಂಡು ಹೋಗಬೇಕಿದೆ ಎಂದರು.
ನಂತರ ಪಹರೆ ವೇದಿಕೆಯ ಸದಸ್ಯರು, ವಿವಿಧ ಶಾಲೆ, ಕಾಲೇಜ್‌ಗಳ ವಿದ್ಯಾರ್ಥಿಗಳು ಕಾರವಾರ, ಕೋಡಿಬಾಗ ರಸ್ತೆಯಲ್ಲಿ ಸಂಚಾರ ನಡೆಸಿದರು. ಈ ಸಂದರ್ಭದಲ್ಲಿ 450 ಹಣ್ಣಿನ ಗಿಡಗಳನ್ನು ಜನರಿಗೆ ಉಚಿತವಾಗಿ ವಿತರಿಸಲಾಯಿತು. ಕೋಡಿಬಾಗದಲ್ಲಿ ನಡೆದ ಮುಕ್ತಾಯ ಕಾರ್ಯಕ್ರಮದಲ್ಲಿ ಸಾಮಾಜಿಕ ಅರಣ್ಯ ವಿಭಾಗದ ಡಿಎಫ್‌ಒ ಮಂಜುನಾಥ ನಾವಿ ಅವರನ್ನು ಸನ್ಮಾನಿಸಲಾಯಿತು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net