45 ಸಾವಿರ ರೂ.ಗೆ ಹರಾಜು

Ramamandir
Published on

ಚಿತ್ರದುರ್ಗ: ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ರಾಜಸ್ಥಾನ ಸಂಘದಿಂದ ಪ್ರಸನ್ನ ಗಣಪತಿ ದೇಗುಲ ಮುಂಭಾಗ ಪೂಜಾ ಕಾರ್ಯಕ್ರಮ ನಡೆಯಿತು.

ಫೋರ್ಟ್ ಸಿಟಿ ಕ್ರಿಕೆಟ್ ಅಸೋಸಿಯೇಷನ್ ರಾಮಮಂದಿರ ಹೋಲುವ ಕಿರು ಮಂದಿರವನ್ನು ಹರಾಜಿನಲ್ಲಿ 45 ಸಾವಿರ ರೂ.ಗೆ ಪಡೆದುಕೊಂಡಿತು. ಇದಕ್ಕೂ ಮುನ್ನ ನಡೆದ ಮೆರವಣಿಗೆಯಲ್ಲಿ ಜೈನ್ ಸಮುದಾಯದ ಪುರುಷರು-ಮಹಿಳೆಯರು ಕುಣಿದು ಸಂಭ್ರಮಿಸಿದರು. ಸಾವಿರಾರು ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net