

ಹುಬ್ಬಳ್ಳಿ: ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ 76ನೇ ವರ್ಷದ ಅಂಗವಾಗಿ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮತ್ತು ಆಲ್ ಇಂಡಿಯಾ ಜೈನ್ ಯುಥ್ ಫೆಡರೇಷನ್‌ನ ಮಹಾವೀರ ಲಿಂಬ್ ಸೆಂಟರ್ ಆಶ್ರಯದಲ್ಲಿ ಇಲ್ಲಿಯ ಕಿಮ್ಸ್ ಪ್ರಾಂಗಣದ ಮಹಾವೀರ ಲಿಂಬ್ ಸೆಂಟರ್‌ನಲ್ಲಿ ಬೃಹತ್ ಉಚಿತ ಕೃತಕ ಕಾಲು ಜೋಡಣಾ ಎರಡನೆ ಹಂತದ ಶಿಬಿರವನ್ನು ಇತ್ತೀಚೆಗೆ ಏರ್ಪಡಿಸಲಾಯಿತು.
ಧಾರವಾಡ ಸೇರಿ ಇತರ ಜಿಲ್ಲೆಗಳಿಂದ ಆಗಮಿಸಿದ್ದ 45 ಅಂಗವಿಕಲರಿಗೆ ಉಚಿತ ಕೃತಕ ಕಾಲು ಜೋಡಣೆ ಮಾಡಲಾಯಿತು.
ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಅಧ್ಯಕ್ಷ ಅರವಿಂದ ಕುಬಸದ, ಕಾರ್ಯದರ್ಶಿ ವಸಂತ ಭಸ್ಮೆ, ಸಮುದಾಯ ಕಾರ್ಯಕ್ರಮದ ನಿರ್ದೇಶಕ ಸುರೇಂದ್ರ ಪೋರವಾಲ, ಆಲ್ ಇಂಡಿಯಾ ಜೈನ್ ಯುಥ್ ಫೆಡರೇಷನ್‌ನ ಮಹಾವೀರ ಲಿಂಬ್ ಸೆಂಟರ್ ಅಧ್ಯಕ್ಷ ಮಹೇಂದ್ರ ಸಿಂಘಿ, ಮಹಾವೀರ ಲಿಂಬ್ ಸೆಂಟರ್ ಚೇರ್ಮನ್ ಗೌತಮ ಗುಲೇಚ್ಛಾ, ಖಜಾಂಚಿ ಮಾನವ ಸಂಘವಿ, ಮಹಾವೀರ ಕುಂದೂರ, ಸುಭಾಷ ಡಂಕ ಇತರರು ಇದ್ದರು.