ಜಿಲ್ಲೆಯಲ್ಲಿ 443 ಜನರಿಗೆ ಕರೊನಾ ಸೋಂಕು

29 pvg municipal news photos.
Published on

ತುಮಕೂರು: ಜಿಲ್ಲೆಯಲ್ಲಿ ಕರೊನಾ ಮಹಾಸ್ಫೋಟವಾಗಿದೆ. ಮಂಗಳವಾರ ಬರೊಬ್ಬರಿ 443 ಜನರಿಗೆ ಸೋಂಕು ದೃಢವಾಗಿದ್ದು, ನಾಲ್ವೃರು ಮೃತಪಟ್ಟಿದ್ದಾರೆ. ತುಮಕೂರು ತಾಲೂಕಿನಲ್ಲಿ 170, ಮಧುಗಿರಿ 41, ಗುಬ್ಬಿ 39, ಕುಣಿಗಲ್ 34, ಪಾವಗಡ 29, ಚಿಕ್ಕನಾಯಕನಹಳ್ಳಿ, ಶಿರಾ ಹಾಗೂ ತಿಪಟೂರು ತಲಾ 28, ಕೊರಟಗೆರೆ 22 ಹಾಗೂ ತುರುವೇಕೆರೆ ತಾಲೂಕಿನಲ್ಲಿ 24 ಜನರಿಗೆ ಸೋಂಕು ಕಾಣಿಸಿಕೊಂಡಿದೆ.

ತುಮಕೂರು ತಾಲೂಕು ದಿಬ್ಬೂರಿನ 45 ವರ್ಷದ ವ್ಯಕ್ತಿ, ಚಿಕ್ಕಪೇಟೆಯ 65 ವರ್ಷದ ವ್ಯಕ್ತಿ, ತಿಪಟೂರು ನಗರದ 61 ವರ್ಷದ ವ್ಯಕ್ತಿ, ಕೊರಟಗೆರೆ ತಾಲೂಕು ಅಕ್ಕಿರಾಂಪುರದ 65 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ. ಜಿಲ್ಲೆಯಲ್ಲಿ 2248 ಸಕ್ರಿಯ ಪ್ರಕರಣಗಳಿದ್ದು, ಐಸಿಯುನಲ್ಲಿ 113 ಜನರು ಚಿಕಿತ್ಸೆ ಪಡೆಯುತ್ತಿದ್ದು, ಸೂಕ್ತ ಚಿಕಿತ್ಸೆಯ್ಲಿದೆ ಜನಸಾಮಾನ್ಯರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮಂಗಳವಾರದ ಪ್ರಕರಣಗಳಲ್ಲಿ 60 ವರ್ಷ ಮೇಲ್ಪೃಟ್ಟ 293 ಪುರುಷರು, 150 ಮಹಿಳೆಯರಿದ್ದಾರೆ. ಐದು ವರ್ಷದೊಳಗಿನ 4 ಮಕ್ಕಳಿಗೂ ವಕ್ಕರಿಸಿದೆ. 259 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುವುದು ಸ್ವಲ್ಪೃ ಸಮಾಧಾನ ತಂದಿದೆ.ಈ ವರೆಗೆ ಜಿಲ್ಲೆಯಲ್ಲಿ 13013 ಜನರಿಗೆ ಸೋಂಕು ತಗುಲಿದಂತಾಗಿದ್ದು, 1.18 ಲಕ್ಷ ಜನರಿಗೆ ಪರೀಕ್ಷೆ ನಡೆಸಲಾಗಿದೆ, 1.01 ಲಕ್ಷ ಜನರಿಗೆ ವರದಿ ನೆಗೆಟಿವ್ ಬಂದಿದೆ.

ಜೆಸಿಎಂ ಆರೋಗ್ಯ ಸ್ಥಿರ: ಬೆಂಗಳೂರು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಆರೋಗ್ಯವಾಗಿದ್ದಾರೆ. ಕರೊನಾ ದೃಢಪಟ್ಟಿದ್ದರೂ ರೋಗ ಲಕ್ಷಣಗಳ್ಲಿದಿರುವುದು ಉತ್ತಮ ಆರೋಗ್ಯದ ಸೂಚನೆಯಾಗಿದೆ. ಆಸ್ಪತ್ರೆಯ ವೈದ್ಯರ ಜತೆ ಜಿಲ್ಲಾಡಳಿತ ನಿರಂತರ ಸಂಪರ್ಕದಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net