ದ್ವಿತೀಯ ಪಿಯುಸಿ ಪರೀಕ್ಷೆಗೆ 442 ವಿದ್ಯಾರ್ಥಿಗಳು ಗೈರು

1 Dwd 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಜಿಲ್ಲೆಯಾದ್ಯಂತ 41 ಪರೀಕ್ಷಾ ಕೇಂದ್ರಗಳಲ್ಲಿ ಶನಿವಾರ ದ್ವಿತೀಯ ಪಿಯುಸಿಯ ಮೊದಲ ಪರೀಕ್ಷೆ ಸುಗಮವಾಗಿ ಜರುಗಿತು.

ಕನ್ನಡ ವಿಷಯಕ್ಕೆ ನೋಂದಾಯಿಸಿಕೊAಡಿದ್ದ 19,169 ವಿದ್ಯಾರ್ಥಿಗಳಲ್ಲಿ 18,726 ಜನ ಹಾಜರಾಗಿ 442 ವಿದ್ಯಾರ್ಥಿಗಳು ಗೈರಾಗಿದ್ದರು. ಬೆಳಗ್ಗೆ 10ರಿಂದ 1ರವರೆಗೆ ಪರೀಕ್ಷೆ ನಡೆದಿದ್ದು, ಯಾವ ಕೇಂದ್ರಗಳಲ್ಲೂ ಪರೀಕ್ಷಾ ಅಕ್ರಮ ನಡೆದಿರುವ ವರದಿಯಾಗಿಲ್ಲ. ಎಲ್ಲ ಪರೀಕ್ಷಾ ಕೇಂದ್ರದಲ್ಲಿ ಸಿಸಿ ಟಿವಿ ಅಳವಡಿಸಲಾಗಿತ್ತು. ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಪರೀಕ್ಷಾ ಕೇಂದ್ರಗಳ ಘಟನಾವಳಿಗಳನ್ನು ವೀಕ್ಷಿಸಲು ಲೈವ್ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net