44 ಕುಟುಂಬಗಳ ಮಾಹಿತಿ ದಾಖಲು

23-stbr-hdl--01
Published on

ಹೂವಿನಹಡಗಲಿ: ಸಾಮಾಜಿಕ, ಶೈಕ್ಷಣಿಕ, ಜಾತಿ ಗಣತಿಯ ಮೊದಲ ದಿನ ಸೋಮವಾರ ತಾಲೂಕಿನ 407 ಬ್ಲಾಕ್‌ಗಳಲ್ಲಿ ಗಣತಿ ಆರಂಭವಾಯಿತು.

ತಹಸೀಲ್ದಾರ್ ಸಂತೋಷ್ ಕುಮಾರ್ ಗಣತಿಗೆ ಚಾಲನೆ ನೀಡಿದ ಬ್ಲಾಕ್ ಹೊರತುಪಡಿಸಿ ಇನ್ನುಳಿದ 406 ಬ್ಲಾಕ್‌ಗಳಲ್ಲಿ ಸರ್ವರ್ ಸಮಸ್ಯೆ ಎದುರಾದ ಕಾರಣ ಯಾವುದೇ ಮಾಹಿತಿ ದಾಖಲಾಗಲಿಲ್ಲ. ಮಂಗಳವಾರ ಮಧ್ಯಾಹ್ನದವರೆಗೂ ಸುಮಾರು 407 ಬ್ಲಾಕ್‌ಗಳಲ್ಲಿ ಸರ್ವರ್ ಸಮಸ್ಯೆ ಇತ್ಯರ್ಥವಾಗಿದ್ದು, 44 ಕುಟುಂಬಗಳ ಮಾಹಿತಿ ದಾಖಲಾಗಿದೆ. ನೆಟ್‌ವರ್ಕ್ ಲಭ್ಯವಾಗುವ ಪ್ರದೇಶದತ್ತ ತೆರಳಿ ಮಾಹಿತಿ ದಾಖಲಿಸಲು ಗಣತಿದಾರರು ಮುಂದಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net