

ಬೀದರ್: ಜಿಲ್ಲಾ ತೋಟಗಾರಿಕೆ ಬೆಳೆಗಾರರ ಮಹಾರಾಟ ಮತ್ತು ಸಂಸ್ಕರಣ ಸಂಘ (ಹಾಪ್ಕಾಮ್ಸ್)ದ 43ನೇ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಗರದಲ್ಲಿ ಜರುಗಿತು.
ನಿರ್ದೇಶಕ ವೈಜಿನಾಥ ಗುಲಾಬೆ ಅಧ್ಯಕ್ಷತೆಯಲ್ಲಿ ಸಭೆ ನಡೆದು, ಸಂಘದ ಅಭಿವೃದ್ಧ ಕುರಿತು ಚರ್ಚೆ ನಡೆಸಲಾಯಿತು. ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಉಮಾಕಾಂತ ಸ್ವಾಮಿ, ಉಪಾಧ್ಯಕ್ಷ ಮಹ್ಮದ್ ಹುಸೇನ್, ನಿರ್ದೇಶಕರಾದ ಬಸವರಾಜ ಹುಡಗೆ, ಜಾಫರ್, ನರಸಪ್ಪ, ಗುರುನಾಥರಡ್ಡಿ, ವಿಠಲ್, ಶಾಲಿವಾನ್ ಪಾಟೀಲ್, ಮೀನಾಕ್ಷಿ ಎಸ್., ಸುಮಂಗಲಾ ಖೂಬಾ ಇದ್ದರು.