43 ದಂಪತಿಗಳಿಗೆ ಸಂತಾನ ಭಾಗ್ಯ

Ull_Father Mullar
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಬಂಜೆತನ ನಿವಾರಣೆ ನಿಟ್ಟಿನಲ್ಲಿ ಮೂರು ವರ್ಷಗಳ ಹಿಂದೆ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಆರಂಭಿಸಲಾದ ‘ಜೆನೆಸಿಸ್ ಫರ್ಟಿಲಿಟಿ ಕ್ಲಿನಿಕ್’ನಲ್ಲಿ ಚಿಕಿತ್ಸೆ ಪಡೆದ 43 ದಂಪತಿಗಳಿಗೆ ಸಂತಾನ ಭಾಗ್ಯ ಲಭಿಸುವ ಮೂಲಕ ಅಭೂತಪೂರ್ವ ಯಶಸ್ಸು ದಾಖಲಿಸಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಫಲಾನುಭವಿಗಳ ಜೊತೆ ಶುಕ್ರವಾರ ಆಸ್ಪತ್ರೆ ಸಭಾಂಗಣದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಫಾದರ್ ಮುಲ್ಲರ್ ಚಾರಿಟೆಬಲ್ ಸಂಸ್ಥೆ ನಿರ್ದೇಶಕ ವಂ.ರಿಚರ್ಡ್ ಅಲೋಶಿಯಸ್ ಕುವೆಲ್ಲೂ ವಾತನಾಡಿ, ವಾರ್ಚ್ 8, 2022ರಂದು ವಿಶ್ವ ಮಹಿಳಾ ದಿನಾಚರಣೆಯಂದು ಅಂದಿನ ಆಡಳಿತಾಧಿಕಾರಿ ರೋಶನ್ ಕ್ರಾಸ್ತಾ ನೇತೃತ್ವದಲ್ಲಿ ‘ಜೆನೆಸಿಸ್ ಫರ್ಟಿಲಿಟಿ ಕ್ಲಿನಿಕ್’ ಆರಂಭಿಸಲಾಗಿತ್ತು. ಚಿಕಿತ್ಸೆಗಾಗಿ 91 ಮಂದಿ ನೋಂದಾಯಿಸಿದ್ದು, ಚಿಕಿತ್ಸೆಯಿಂದ 43 ಮಂದಿ ದಂಪತಿಗೆ ಸಂತಾನ ಭಾಗ್ಯ ಒದಗಿ ಬಂದಿದೆ. 27 ಮಂದಿ ಚಿಕಿತ್ಸೆ ಮುಂದುವರಿಸಿದ್ದಾರೆ. 21 ಮಂದಿ ವಿವಿಧ ಕಾರಣಗಳಿಂದ ಚಿಕಿತ್ಸೆ ನಿಲ್ಲಿಸಿದ್ದಾರೆ ಎಂದರು.

ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಪ್ರಸೂತಿ ಹಾಗೂ ಸೀರೋಗ ವಿಭಾಗದ ಡಾ.ವಿಲ್ಮಾ ಡಿಸೋಜ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಹೊರರೋಗಿ ವಿಭಾಗದಲ್ಲಿ ಬೆಳಗ್ಗೆ 8.45ರಿಂದ ಸಂಜೆ 4ರವರೆಗೆ ವೈದ್ಯರು ಲಭ್ಯರಿರುತ್ತಾರೆ. ಸಂತಾನೋತ್ಪತ್ತಿ ಆರೈಕೆಯನ್ನು ಸಮಗ್ರವಾಗಿ ಒದಗಿಸುವುದು, ಸಲಹೆ ಮತ್ತು ಸವಾಲೋಚನೆ ಮೂಲಕ ಸಮಗ್ರ ಆರೋಗ್ಯ ರಕ್ಷಣೆ ನೀಡುವುದು, ಸಮರ್ಥ ಮತ್ತು ಅನುಭವಿ ವೈದ್ಯರಿಂದ ದಂಪತಿಗೆ ಹೋಮಿಯೋಪಥಿ ಚಿಕಿತ್ಸೆ ಮೂಲಕ ವ್ಯಕ್ತಿಗತ ಆರೈಕೆಯಿಂದ ತಾವು ಪಾಲಕರಾಗುವ ಕನಸು ನನಸಾಗಿಸಲು ಜಾಗೃತಿ ಮೂಡಿಸುವುದು ಕ್ಲಿನಿಕ್‌ನ ಉದ್ದೇಶ ಎಂದರು.

ಫಾ.ರೋಶನ್ ಕ್ರಾಸ್ತಾ ವಾತನಾಡಿ, ಹೋಮಿಯೋಪಥಿ ಚಿಕಿತ್ಸಾ ವಿಧಾನದಲ್ಲಿಯೂ ಈ ರೀತಿಯ ಫಲಿತಾಂಶ ಬಂದಿರುವುದು ನಿಜಕ್ಕೂ ಶ್ಲಾಘನೀಯ. ಈ ವಿಚಾರ ವ್ಯಾಪಕ ಪ್ರಚಾರ ಪಡೆಯಬೇಕು. ಹೋಮಿಯೋಪಥಿಯಿಂದಾದ ಉಪಯೋಗದ ಬಗ್ಗೆ ಫಲಾನುಭವಿಗಳು ಇತರರೊಂದಿಗೆ ಹಂಚಿಕೊಳ್ಳುವ ಮೂಲಕ ಅವರ ಬಾಳಿಗೂ ಬೆಳಕಾಗಬೇಕು ಎಂದರು.

ಫಾದರ್ ಮುಲ್ಲರ್ ಹೋಮಿಯೋಪಥಿ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಉಪ ಆಡಳಿತಾಧಿಕಾರಿ ಅಶ್ವಿನ್ ಕ್ರಾಸ್ತಾ, ಹೋಮಿಯೋಪಥಿ ಸಂಸ್ಥೆ ಆಡಳಿತಾಧಿಕಾರಿ ರೋಶನ್ ಕ್ರಾಸ್ರಾ, ಡಾ.ನೆಲ್ಸನ್ ಧೀರಜ್ ಪಾಯ್ಸ, ಫಾದರ್ ಮುಲ್ಲರ್ ಹೋಮಿಯೋಪಥಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಇ.ಎಸ್.ಜೆ.ಪ್ರಭುಕಿರಣ್, ಜೆನೆಸಿಸ್ ಫರ್ಟಿಲಿಟಿ ಕ್ಲಿನಿಕ್‌ನ ಸಂಯೋಜಕಿ ಡಾ.ವಿಲ್ಮಾ ಮೀರಾ ಡಿಸೋಜ, ವೈದ್ಯಕೀಯ ಅಧೀಕ್ಷಕ ಡಾ.ಗಿರೀಶ್ ನಾವಡ, ಡಾ.ದೀಪಾ ಪಾಯಿಸ್, ಎಫ್.ಎಂ.ಒಪಿಎಸ್‌ನ ಪ್ರಾಂಶುಪಾಲ ಡಾ.ಸತೀಶ್, ವಾಧ್ಯಮ ಸಮಿತಿ ಸಂಯೋಜಕಿ ಡಾ.ಶರ್ಲಿನ್ ಇ.ಪಾವ್ಲ್, ಡಾ.ಜೆನಿಟಾ ರ್ನಾಂಡಿಸ್, ಡಾ.ಸಾವಿಯೋನಾ ರ್ನಾಂಡಿಸ್, ಡಾ.ಅನಿತಾ ಲೋಬೋ ಹಾಗೂ ಫಲಾನುಭವಿ ದಂಪತಿಗಳು ಉಪಸ್ಥಿತರಿದ್ದರು.

ಪ್ರತಿದಿನ ಸಿಗುವ ವೈದ್ಯರು

ವಿಭಾಗ 1 (ಸೋಮವಾರ)

ಡಾ.ಜೆನಿಟಾ ಫರ್ನಾಂಡಿಸ್ ಮತ್ತು ಡಾ.ಆಡ್ಮಿನ್ ಗೊನ್ಸಾಲ್ವಿಸ್ ವಿಭಾಗ 2 (ಮಂಗಳವಾರ)

ಡಾ.ವಿಲ್ಮಾ ಡಿಸೋಜ ಮತ್ತು ಡಾ.ಶರ್ಲಿನ್ ಪಾವ್ಲ್, ವಿಭಾಗ 3 (ಬುಧವಾರ)

ಡಾ.ಸಾವಿಯೋನಾ ರ್ನಾಂಡಿಸ್ ಮತ್ತು ಡಾ.ಅನಿಲಾ ಇ.ಟಿ., ವಿಭಾಗ 4 (ಗುರುವಾರ)

ಡಾ.ಅನಿತಾ ಲೋಬೊ ಮತ್ತು ಡಾ.ಆಡ್ಡಿನ್ ಗೊನ್ಸಾಲ್ವಿಸ್, ವಿಭಾಗ 5 (ಶುಕ್ರವಾರ)

ಡಾ.ವಿಲ್ಮಾ ಡಿಸೋಜ ಮತ್ತು ಡಾ.ಶರ್ಲಿನ್ ಪಾವ್ಲ್, ವಿಭಾಗ 6 (ಶನಿವಾರ)

ಡಾ.ಸಾವಿಯೋನಾ ರ್ನಾಂಡಿಸ್ ಮತ್ತು ಡಾ.ಶಹನಾಜ್. ಕಂಕನಾಡಿ ಹೋಮಿಯೋಪಥಿ ಹೊರರೋಗಿ ವಿಭಾಗ: ಡಾ.ವಿಲ್ಮಾ ಡಿಸೋಜ ಮತ್ತು ಡಾ.ಅನಿತಾ ಲೋಬೋ(ಪ್ರತಿ ಸೋಮವಾರ)

ಹೋಮಿಯೋಪಥಿ ಚಿಕಿತ್ಸಾ ವಿಧಾನದಲ್ಲೂ ಈ ರೀತಿಯ ಫಲಿತಾಂಶ ಬಂದಿರುವುದು ನಿಜಕ್ಕೂ ಶ್ಲಾಘನೀಯ. ಈ ವಿಚಾರ ವ್ಯಾಪಕ ಪ್ರಚಾರ ಪಡೆಯಬೇಕು. ಹೋಮಿಯೋಪಥಿಯಿಂದಾದ ಉಪಯೋಗದ ಬಗ್ಗೆ ಫಲಾನುಭವಿಗಳು ಇತರರೊಂದಿಗೆ ಹಂಚಿಕೊಳ್ಳುವ ಮೂಲಕ ಅವರ ಬಾಳಿಗೂ ಬೆಳಕಾಗಬೇಕು. ರೋಶನ್ ಕ್ರಾಸ್ತಾ, ಚರ್ಚ್ ಧರ್ಮಗುರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net