42,30,901 ಲಕ್ಷ ರೂ. ಕಾಣಿಕೆ ಸಂಗ್ರಹ

17mlk1
Published on

ಮೇಲುಕೋಟೆ : ಚೆಲುವನಾರಾಯಣಸ್ವಾಮಿ ಸಮೂಹ ದೇವಾಲಯಗಳ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, 42,30,901 ಲಕ್ಷ ರೂ. ಕಾಣಿಕೆ ಸಂಗ್ರಹವಾಗಿದೆ.

ಚೆಲುವನಾರಾಯಣಸ್ವಾಮಿ ದೇವಾಲಯದ ಹುಂಡಿಯಲ್ಲಿ 33,01,830 ರೂ. ಹಾಗೂ ಬೆಟ್ಟದ ಯೋಗಾ ನರಸಿಂಹಸ್ವಾಮಿ ದೇವಾಲಯದ ಹುಂಡಿಗಳಲ್ಲಿ 9,29,071 ರೂ. ಕಾಣಿಕೆ ಸಂಗ್ರಹವಾಗಿದೆ. ಜತೆಗೆ 292 ಗ್ರಾಂ ಚಿನ್ನ ಮತ್ತು 394 ಗ್ರಾಂ ಬೆಳ್ಳಿ ಕಾಣಿಕೆಗಳು ದೊರೆತಿವೆ. ಒಬ್ಬರೇ ಭಕ್ತರು ಗಂಟಾಗಿ 5 ಲಕ್ಷ ರೂ. ಕಾಣಿಕೆ ಸಲ್ಲಿಸಿರುವುದು ಈ ಬಾರಿಯ ವಿಶೇಷವಾಗಿದೆ.

45 ದಿನಗಳ ಅವಧಿಯ ಹುಂಡಿಗಳನ್ನು ಬುಧವಾರ ಮತ್ತು ಗುರುವಾರ ತೆರೆದು ಎಣಿಕೆ ಮಾಡಲಾಯಿತು. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಸಮಕ್ಷಮದಲ್ಲಿ ನಡೆದ ಹುಂಡಿಗಳ ಎಣಿಕೆ ಕಾರ್ಯದಲ್ಲಿ ಎಸ್‌ಬಿಐ ಮೇಲುಕೋಟೆ ಶಾಖೆ ವ್ಯವಸ್ಥಾಪಕ ಪ್ರಶಾಂತ್, ದೇಗುಲದ ಸಿಬ್ಬಂದಿ ಹಾಗೂ ವಿವಿಧ ಸ್ತ್ರೀ ಶಕ್ತಿ ಸಂಘದ ಸದಸ್ಯೆಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net