42 ಲೀಟರ್ ನಕಲಿ ಮದ್ಯ ವಶ

2MDG6
Published on

ಮುಂಡರಗಿ: ಪಟ್ಟಣದ ಹಳ್ಳಿಮನೆ ಢಾಬಾ ಹಾಗೂ ತಾಲೂಕಿನ ಕೊರ್ಲಹಳ್ಳಿ ಬಳಿಯ ಮಾತಾ ಢಾಬಾದಲ್ಲಿ ನಕಲಿ ಮದ್ಯ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಮಂಗಳವಾರ ರಾತ್ರಿ ಬಂಧಿಸಿ ಅಪಾರ ಪ್ರಮಾಣದ ಮದ್ಯ ವಶಪಡಿಸಿಕೊಂಡಿದ್ದಾರೆ. ಅಬಕಾರಿ ಉಪ ಆಯುಕ್ತ ಮೋತಿಲಾಲ್ ನಾಯಕ ನೇತೃತ್ವದ ತಂಡ ದಾಳಿ ನಡೆಸಿ ಎರಡು ಢಾಬಾಗಳಲ್ಲಿ ಅಂದಾಜು 45 ಸಾವಿರ ರೂ. ವೆಚ್ಚದ 5 ಬಾಕ್ಸ್ (42 ಲೀಟರ್) ನಕಲಿ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿತರಾದ ವೀರೇಶ ನವನಳ್ಳಿ, ಮಾರುತಿ ಗಚ್ಚಿನಮನಿ ಹಾಗೂ ಮದ್ಯ ಪೂರೈಸುತ್ತಿದ್ದ ಹೂವಿನಹಡಗಲಿಯ ರಮೇಶ ನಾಯಕ, ಬಾಳೇಶ ಚಿರಚನಕಲ್ಲು ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಈ ಕುರಿತು ಅಬಕಾರಿ ಠಾಣೆಯಲ್ಲಿ ಎರಡು ಪ್ರತೇಕ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಅಬಕಾರಿ ನಿರೀಕ್ಷಕ ದೀಪಕ ಎಸ್. ತಿಳಿಸಿದರು. ದಾಳಿಯಲ್ಲಿ ಅಬಕಾರಿ ಉಪ ಅಧೀಕ್ಷಕ ಮಂಜುನಾಥ ಮಾಲಿ ಪಾಟೀಲ, ಅಬಕಾರಿ ಉಪ ನಿರೀಕ್ಷಕ ವಿವೇಕ ಮಂಕಾಳೆ ಹಾಗೂ ಅಬಕಾರಿ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net