

ಚಿಕ್ಕಮಗಳೂರು: ಪ್ರಸಕ್ತ ಸಾಲಿನಲ್ಲಿ ಸುಮಾರು ಆರು ಲಕ್ಷ ರೂ. ದುಡಿಯುವ ಬಂಡವಾಳ ಸಂಗ್ರಹಿಸುವ ಮೂಲಕ ವಿಶ್ವಕರ್ಮ ಕೈಗಾರಿಕಾ ಮತ್ತು ವಿವಿದೋz್ದೆÃಶ ಸಹಕಾರ ಸಂಘ ೪೨ ಸಾವಿರ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಸ್.ಕೆ.ಶಂಕರಯ್ಯ ತಿಳಿಸಿದರು.
ನಗರದ ಬಸವನಹಳ್ಳಿ ಸಮೀಪ ಶ್ರೀವಿಶ್ವಕರ್ಮ ಕೈಗಾರಿಕಾ ಮತ್ತು ವಿವಿದೋz್ದÉÃಶ ಸಹಕಾರ ಸಂಘದ ೨೦೨೩-೨೪ನೇ ಸಾಲಿನ ಸರ್ವಸದಸ್ಯರ ೫೯ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ಸಂಘದಲ್ಲಿ ೨೫೦ಕ್ಕೂ ಹೆಚ್ಚು ಮಂದಿ ಸದಸ್ಯತ್ವ ಹೊಂದಿದೆ. ಪ್ರತಿವರ್ಷವು ಷೇರು ಸಂಗ್ರ ಹಿಸಲಾಗುತ್ತಿದೆ. ಗುಡಿ ಕೈಗಾರಿಕೆ, ಸ್ವಸಹಾಯ ಸಂಘಗಳಿಗೆ ವಿವಿಧ ರೀತಿಯ ಉತ್ಪನ್ನಗಳನ್ನು ತಯಾರಿಸಲು ಆರ್ಥಿಕ ನೆರವು ನೀಡಲು ಸಹಕರಿಸಲಾಗುವುದು ಎಂದು ತಿಳಿಸಿದರು.
ಮುಂಬರುವ ಸಾಲಿನಲ್ಲಿ ಸಂಘ ಸುಮಾರು ಮೂರು ಲಕ್ಷ ರೂ.ಗಳ ಷೇರು ಸಂಗ್ರಹಣೆ ಮಾಡುವ ಗುರಿ ಹೊಂದಿದೆ. ಜಿಲ್ಲೆಯ ಎಲ್ಲ ತಾಲೂಕುಗಳಿಂದ ಜನಾಂಗದವರು ಷೇರುದಾರರಾಗಲು ಮುಂದೆ ಬರಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸಿ.ಜನಾರ್ಧನ ಆಚಾರ್, ನಿರ್ದೇಶಕರಾದ ಕೆ.ಎಲ್.ನಾಗರಾಜು, ಎಚ್.ಬಿ.ಪಾರ್ವತಮ್ಮ, ಬಿ.ಎಸ್.ನಾಗೇಂದ್ರ, ಸಿ.ಜೆ.ಬಾಲಕೃಷ್ಣ, ಬಿ.ಎನ್.ನಾರಾಯಣ್, ಅನ್ನಪೂರ್ಣಮ್ಮ, ಎಸ್.ಕೆ.ಮಹೇಶ್ವರಯ್ಯ, ಪ್ರಶಾಂತ್ ಆಚಾರ್, ಜಿ.ಪಿ.ವಿನೋದಾಚಾರ್, ಸೂರ್ಯಗೋವಿಂದ್, ಕಾರ್ಯದರ್ಶಿ ವೀರಭದ್ರಚಾರ್ ಮತ್ತಿತರರಿದ್ದರು.