ಜಿಲ್ಲೆಯಲ್ಲಿ ೪೨.೬೧ ಮಿ.ಮೀ. ಮಳೆ

download
Published on

ಮಡಿಕೇರಿ: ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡಂತೆ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೪೨.೬೧ ಮಿ.ಮೀ. ಮಳೆಯಾಗಿದೆ.


ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೩೨.೧೮ ಮಿ.ಮೀ, ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ ೩೫.೧೨ ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ೬೦.೫೩ ಮಿ.ಮೀ. ಮಳೆಯಾಗಿದೆ.

ಜಿಲ್ಲೆಯ ಹೋಬಳಿವಾರುಗಳಾದ ಮಡಿಕೇರಿ ಕಸಬಾ ೩೮.೬೦, ನಾಪೋಕ್ಲು ೨೮.೬೦, ಸಂಪಾಜೆ ೧೯, ಭಾಗಮಂಡಲ ೪೨.೫೦, ವಿರಾಜಪೇಟೆ ಕಸಬಾ ೭.೮೦, ಹುದಿಕೇರಿ ೩೦.೫೦, ಶ್ರೀಮಂಗಲ ೧೦೨, ಪೊನ್ನಂಪೇಟೆ ೨೮.೨೦, ಅಮ್ಮತ್ತಿ ೯, ಬಾಳೆಲೆ ೩೩.೨೦, ಸೋಮವಾರಪೇಟೆ ಕಸಬಾ ೮೦.೨೦, ಶನಿವಾರಸಂತೆ ೮೦.೪೦, ಶಾಂತಳ್ಳಿ ೧೫೪, ಕೊಡ್ಲಿಪೇಟೆ ೩೦.೮೦, ಕುಶಾಲನಗರ ೧.೮೦, ಸುಂಟಿಕೊಪ್ಪ ೧೬ ಮಿ.ಮೀ.ಮಳೆಯಾಗಿದೆ.


ಹಾರಂಗಿ ಜಲಾಶಯದ ಗರಿಷ್ಠ ಮಟ್ಟ ೨,೮೫೯ ಅಡಿಗಳಾಗಿದ್ದು, ೨೮೪೯.೬೦ ಅಡಿ ನೀರಿದೆ. ಇಂದಿನ ನೀರಿನ ಒಳಹರಿವು ೫೭೪೮ ಕ್ಯೂಸೆಕ್ ಇದ್ದು, ನೀರಿನ ಹೊರ ಹರಿವು ನದಿಗೆ ೫೦ ಕ್ಯೂಸೆಕ್ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net