

ಬೆಟಗೇರಿ: ಗ್ರಾಮದ ಶ್ರೀ ಈಶ್ವರ ದೇವಸ್ಥಾನದಲ್ಲಿ ಆ.24ರಿಂದ 28ರ ವರೆಗೆ 41ನೇ ಸತ್ಸಂಗ ಸಮ್ಮೇಳನ ಜರುಗಲಿದೆ. ಆ.24ರಿಂದ 28ರಂದು ಸಂಜೆ 7.30 ಗಂಟೆಗೆ ಪ್ರವಚನ ನಡೆಯಲಿದೆ. ಆ.27ರಂದು ಇಂಚಲದ ಸಾಧು ಸಂಸ್ಥಾನಮಠದ ಡಾ.ಶಿವಾನಂದ ಭಾರತಿ ಸ್ವಾಮೀಜಿ ಅವರನ್ನು ಮೆರವಣಿಗೆ ಮೂಲಕ ಸ್ವಾಗತಿಸಲಾಗುವುದು. ಸಂಜೆ 7.30ಕ್ಕೆ ಪ್ರವಚನ ಹಾಗೂ ಕರಿಕಟ್ಟಿ ಗುರುನಾಥ ಶಾಸ್ತ್ರಿ ಕೀರ್ತನೆ ಪ್ರಸ್ತುತಪಡಿಸುವರು. ಆ.28ರಂದು ಸಾಧಕರ ಸತ್ಕಾರ, ಶ್ರೀಗಳ ಆಶೀರ್ವಚನ, ಮಹಾಮಂಗಲ, ಮಹಾಪ್ರಸಾದ ಜರುಗಲಿದೆ. ಸತ್ಸಂಗ ಸಮ್ಮೇಳನ ಸಮಾರೊಪಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.