

ದೇವನಹಳ್ಳಿ: ದೇವನಹಳ್ಳಿ-ವಿಜಯಪುರ ಕ್ರಾಸ್ ಬಳಿ 41 ಕೆಜಿ ಗಾಂಜಾ ವಶಪಡಿಸಿಕೊಂಡಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ತಮಿಳುನಾಡಿನ ವೇಲೂರು ಜಿಲ್ಲೆಯ ಕಂದಸ್ವಾಮಿ ನಗರದ ಸೆಲ್ವಂ (45) ಮತ್ತು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕಾವಲಪಲ್ಲಿಯ ದೇವೇಂದ್ರ (57) ಬಂಧಿತರು.
ದೇವನಹಳ್ಳಿ-ವಿಜಯಪುರ ಕ್ರಾಸ್ ಬಳಿ ಸಾಗಿಸುತ್ತಿದ್ದ ಮಾಹಿತಿ ಮೇರೆಗೆ ಬಂಧಿಸಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಬುಧವಾರ ಎಸಿಪಿ ಪಿ.ಟಿ.ಸುಬ್ರಹ್ಮಣ್ಯ ತಿಳಿಸಿದರು.
ಡಿಸಿಪಿ ಸಿ.ಕೆ.ಬಾಬಾ ಮಾರ್ಗದರ್ಶನದಲ್ಲಿ ದೇವನಹಳ್ಳಿ ಠಾಣೆ ಎಸಿಪಿ ಸುಬ್ರಹ್ಮಣ್ಯ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್ ಮೊಹಮದ್ ರಫೀಕ್ ಹಾಗೂ ಪಿಎಸ್‌ಐಗಳಾದ ನಾಗರಾಜ್, ಕೆ.ಸಿ.ಸಾವಿತ್ರಿ, ಅಪರಾಧ ವಿಭಾಗದ ಸಿಬ್ಬಂದಿ ರವಿ ಪಾಟೀಲ್, ವಿಜಯಕುಮಾರ್ ನಾಯಕ್, ತಯೂಬ್ ಹೊಂಗಲ್, ಇಸ್ಮೈಲ್ ತಂಡ ಕಾರ್ಯಾಚರಣೆ ನಡೆಸಿದ್ದು, ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.