ಇನ್ಫೋಸಿಸ್ ಕ್ಲೌಡ್ ರಾಡಾರ್ ಅಳವಡಿಸಿಕೊಂಡಲ್ಲಿ 414 ಬಿಲಿಯನ್ ಡಾಲರ್ ಲಾಭ ಸಾಧ್ಯತೆ: ಇನ್ಫೋಸಿಸ್ ಸಂಶೋಧನೆ

infosys
Published on

ಬೆಂಗಳೂರು: ಭವಿಷ್ಯದ ಪೀಳಿಗೆಯ ಡಿಜಿಟಲ್ ಸೇವೆಗಳು ಮತ್ತು ಕನ್ಸಲ್ಟಿಂಗ್​ನಲ್ಲಿ ಮುಂಚೂಣಿಯಲ್ಲಿರುವ ಇನ್ಫೋಸಿಸ್ ಸಂಸ್ಥೆ, ಇನ್ಫೋಸಿಸ್ ಕ್ಲೌಡ್ ರಾಡಾರ್ ಅನಾವರಣಗೊಳಿಸಿದೆ. ಇದು ಉದ್ದಿಮೆ ಕ್ಲೌಡ್ ಬಳಕೆ ಮತ್ತು ವ್ಯಾಪಾರ ಬೆಳವಣಿಗೆ ನಡುವಿನ ಸಂಪರ್ಕದ ಕೊಂಡಿಯಾಗಿ ಕಾರ್ಯ ನಿರ್ವಹಿಸಲಿದೆ.

ಕ್ಲೌಡ್ ಅಳವಡಿಕೆ ಮಾಡಿಕೊಂಡಲ್ಲಿ 414 ಬಿಲಿಯನ್ ಡಾಲರ್​ವರೆಗೆ ನಿವ್ವಳ ಲಾಭಗಳನ್ನು ಗಳಿಸಲು ಸಾಧ್ಯವಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

ಇನ್ಫೋಸಿಸ್​ನ ಸಂಶೋಧನಾ ವಿಭಾಗವಾಗಿರುವ ಇನ್ಫೋಸಿಸ್ ನಾಲೆಜ್ ಇನ್ ಸ್ಟಿಟ್ಯೂಟ್ (ಐಕೆಐ) ಈ ಕ್ಲೌಡ್ ರಾಡಾರ್ 2021 ರ ಸಮೀಕ್ಷೆಯನ್ನು ಕೈಗೊಂಡಿದೆ. ಈ ಸಮೀಕ್ಷೆಯಲ್ಲಿ ಯುಎಸ್, ಯುಕೆ, ಫ್ರಾನ್ಸ್, ಜರ್ಮನಿ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನ 2,500 ಕ್ಕೂ ಅಧಿಕ ಕಂಪನಿಗಳು ಕ್ಲೌಡ್ ಬಳಕೆ ವಿಚಾರದಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿವೆ. ಇದು ಕ್ಲೌಡ್ ಗೆ ಸಂಬಂಧಿಸಿದಂತೆ ವ್ಯಾಪಾರ ಕಾರ್ಯದಕ್ಷತೆಯ ಗುರಿಗಳ ವ್ಯಾಪ್ತಿಯನ್ನು ಒಳಗೊಂಡಿದೆ ಮತ್ತು ಮಾರುಕಟ್ಟೆಯ ವೇಗ ಹಾಗೂ ಸಾಮರ್ಥ್ಯಗಳ ನಿರ್ದಿಷ್ಟವಾದ ಸಂಪರ್ಕಗಳನ್ನು ಪತ್ತೆ ಮಾಡಿದೆ.

ಹೊಸ ಪರಿಹಾರಗಳು ಮತ್ತು ಸೇವೆಗಳನ್ನು ಕ್ಷಿಪ್ರವಾಗಿ ಮಾರುಕಟ್ಟೆಗೆ ತರುವಾಗ ಕ್ಲೌಡ್ ಬಳಸಿಕೊಂಡಾಗ ಪ್ರಬಲವಾದ ಲಾಭದ ಸಂಪರ್ಕ ಅಂದರೆ ಲಿಂಕ್ ಅನ್ನು ಗುರುತಿಸಲಾಗಿದೆ. ಈ ಹೂಡಿಕೆಗಳು ಎಐ ಮತ್ತು ಆಟೋಮೇಷನ್ ಮೇಲೆ ಪ್ರಭಾವ ಬೀರುವಂತಹ ಮತ್ತು ಕ್ಲೌಡ್ ಆಧಾರಿತ ಹೊಸ ಆದಾಯದ ಮೂಲಗಳನ್ನು ಹೊಂದಲು ಒಂದು ಅಡಿಪಾಯವನ್ನು ಹಾಕಿಕೊಡುತ್ತವೆ ಎಂದು ಸಂಸ್ಥೆ ಮಾಹಿತಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net