ಪೂರ್ವ ನಿಲ್ದಾಣದಲ್ಲಿ 41 ರೈಲು ನಿಲುಗಡೆ ತಾತ್ಕಾಲಿಕ ರದ್ದು

Vijayavani's top news of the day 01/02/2025
Published on

ಬೆಂಗಳೂರು: ನಗರದ ಬೆಂಗಳೂರು ಪೂರ್ವ ನಿಲ್ದಾಣದಲ್ಲಿ ಕೆಲ ಪ್ಲಾಟ್‌ಫಾರ್ಮ್‌ಗಳನ್ನು ಬದಲಾಯಿಸಲು ಕಾಮಗಾರಿ ಕೈಗೆತ್ತಿಕೊಳ್ಳಲಿರುವ ಹಿನ್ನೆಲೆ ಈ ತಿಂಗಳ 13ರಿಂದ ಮುಂದಿನ ಸೂಚನೆಯವರೆಗೆ 41 ರೈಲುಗಳ ನಿಲುಗಡೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.

ತಾತ್ಕಾಲಿಕವಾಗಿ ರದ್ದುಗೊಳಿಸಲಾಗುವ ರೈಲುಗಳ ಪೈಕಿ 15 ಎಕ್ಸ್‌ಪ್ರೆಸ್ ರೈಲುಗಳು ಹಾಗೂ 26 ಪ್ಯಾಸೆಂಜರ್/ಮೆಮು ರೈಲುಗಳು ಸೇರಿವೆ. ಇವುಗಳಲ್ಲಿ ಕೆಎಸ್‌ಆರ್ ಬೆಂಗಳೂರು-ಬಂಗಾರಪೇಟೆ, ತಿರುಪತಿ-ಚಾಮರಾಜನಗರ, ಕಾಚಿಗುಡ-ಮೈಸೂರು, ಕನ್ಯಾಕುಮಾರಿ-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲುಗಳು ಸೇರಿವೆ. ಜತೆಗೆ ಬೆಂಗಳೂರು-ಧರ್ಮಪುರಿ, ಬೆಂಗಳೂರು-ಕೋಲಾರ, ಕೆಎಸ್‌ಆರ್ ಬೆಂಗಳೂರು-ವೈಟ್‌ಫೀಲ್ಡ್, ಜೋಲಾರ್‌ಪೇಟೆ-ಕೆಎಸ್‌ಆರ್ ಬೆಂಗಳೂರು, ಧರ್ಮಾವರಂ-ಕೆಎಸ್‌ಆರ್ ಬೆಂಗಳೂರು ಪ್ಯಾಸೆಂಜರ್/ಮೆಮು ರೈಲುಗಳು ಸೇರಿವೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net