40ಲೀಟರ್ ಶೇಂದಿ ವಶ, ಓರ್ವನ ಬಂಧನ

IMG-20201208-WA0070
Published on

ವಿಜಯಪುರ:ಗ್ರಾಮ ಪಂಚಾಯತಿ ಚುನಾವಣೆ ಬೆನ್ನಲ್ಲೇ ಅಕ್ರಮ ಶೇಂದಿ ಹವಾ ಶುರುವಾಗಿದೆ. ವಿಜಯಪುರ ಅಬಕಾರಿ ಪೊಲೀಸರು ಕಾರ್ಯಾಚರಣೆ ನಡೆಸಿ, ವಿಜಯಪುರ ತಾಲೂಕಿನ ಬುರಣಾಪೂರದಲ್ಲಿ ಅಕ್ರಮ ಶೇಂದಿ ಇರುವುದನ್ನು ಪತ್ತೆ ಮಾಡಿದ್ದಾರೆ. ಅಕ್ರಮವಾಗಿ ಮಾರಾಟ ಮಾಡಲು ಶೇಂದಿ ಕೊಂಡೊಯ್ದಿದ್ದ ಭರತ ದೊಡಮನಿ ಎಂಬ ಆರೋಪಿಯನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ. ವಿಜಯಪುರದ ಹರಣಶಿಖಾರಿ ಕಾಲೋನಿ‌ ನಿವಾಸಿಯಾಗಿರುವ ಭರತ ಕಳ್ಳ ದಂಧೆ ನಡೆಸುತ್ತಿದ್ದ. ಆಟೋ ರಿಕ್ಷಾದಲ್ಲಿ ಎರಡು ಲೀಟರ್ ಅಳತೆಯ 20 ಪ್ಲಾಸ್ಟಿಕ್ ಬಾಟಲಿಯಲ್ಲಿ ಶೇಂದಿ ಮಾರಾಟಕ್ಕೆ ಕೊಂಡೊಯ್ದಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ಎರಡೂವರೆ ಲಕ್ಷ ರೂಪಾಯಿ ಮೌಲ್ಯದ ಆಟೋ ಹಾಗೂ 40 ಲೀಟರ್ ಶೇಂದಿ ಜಪ್ತಿ ಮಾಡಲಾಗಿದ್ದು, ವಿಜಯಪುರ ಅಬಕಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net