ವಿದೇಶ ಪ್ರಯಾಣ ಮಾಡಿದ 4 ಸಾವಿರ ಮಂದಿ ಕೈಗೆ ಮುದ್ರೆ

Home Quarantain
Published on

ಕೆ.ಆರ್.ಪುರ: ವಿದೇಶಕ್ಕೆ ಪ್ರಯಾಣದಿಂದ ಹಿಂದಿರುಗಿದ 4 ಸಾವಿರಕ್ಕೂ ಹೆಚ್ಚು ಜನರನ್ನು ತಾಲೂಕು ವ್ಯಾಪ್ತಿಯಲ್ಲಿ ಪತ್ತೆಹಚ್ಚಲಾಗಿದ್ದು, ಪ್ರತಿಯೊಬ್ಬರ ಮನೆಗೆ ಭೇಟಿ ನೀಡಿ ಕೈಗೆ ಮುದ್ರೆ ಹಾಕಲಾಗಿದೆ. ಮನೆಯ ಗೋಡೆಗೆ ಸೂಚನಾ ಫಲಕ ಅಂಟಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ ಎಂದು ತಹಸೀಲ್ದಾರ್ ತೇಜಸ್​ಕುಮಾರ್ ತಿಳಿಸಿದ್ದಾರೆ.

ವಿವಿಧ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು. ರಾಜಧಾನಿಗೆ ಶೇ. 90 ತರಕಾರಿ ಸರಬರಾಜು ಮಾಡುತ್ತಿದ್ದ ಕೆ.ಆರ್.ಪುರ ಮಾರುಕಟ್ಟೆಯಲ್ಲಿ ಜನಸಂದಣಿ ನಿಯಂತ್ರಿಸುವುದಕ್ಕೆ ಸಗಟು ಹಾಗೂ ಚಿಲ್ಲರೆ ವ್ಯಾಪಾರಕ್ಕೆ ಕಡಿವಾಣ ಹಾಕಲಾಗಿದೆ. ಸಾಮಾಜಿಕ ಅಂತರ ಕಾಪಾಡುವ ಉದ್ದೇಶದಿಂದ ಮೇಡಹಳ್ಳಿ, ಅಯ್ಯಪ್ಪನಗರ, ಟಿ.ಸಿ.ಪಾಳ್ಯ , ಐಟಿಐ ಬಸ್ ನಿಲ್ದಾಣ, ಕೆ.ಆರ್. ಪುರ ಬಸ್ ನಿಲ್ದಾಣಗಳಲ್ಲಿ ಅಂಗಡಿ ತೆರೆಯಲು ವ್ಯವಸ್ಥೆ ಮಾಡಲಾಗುವುದು ಎಂದರು.

ಮನೆಯಲ್ಲಿ ವಾಸ ಮಾಡುವ 20 ಸಾವಿರಕ್ಕೂ ಹೆಚ್ಚು ಜನರಿಗೆ ಪಡಿತರ ಮೂಲಕ ರೇಷನ್ ಸರಬರಾಜು ಮಾಡಲು ಕ್ರಮ ಕೈಗೊಂಡಿದ್ದೇವೆ. ಕೂಲಿ ಕಾರ್ವಿುಕರಿಗೆ ಭಾನುವಾರ ಮನೆ ಮನೆಗೆ ಹೋಗಿ ಪಡಿತರ ವಿತರಿಸಲಾಗಿದೆ ಎಂದರು. ಜಂಟಿ ಆಯುಕ್ತ ವೆಂಕಟಾಚಲಾಪತಿ, ತಾಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಶೇಖರ್, ಕೆ.ಆರ್. ಪುರ ಪೊಲೀಸ್ ಠಾಣಾಧಿಕಾರಿ ಅಂಬರೀಷ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net