

ವಿಜಯಪುರ: ದಿ. ಡಾ. ಸಿ. ಆರ್. ಬಿದರಿ ಸ್ಮರಣಾರ್ಥ ಕ್ಯಾನ್ಸರ್ ಕುರಿತು ಮುಂದುವರಿದ ವೈದ್ಯಕಿಯ ಶಿಣ ರಾಜ್ಯ ಮಟ್ಟದ ಉಪನ್ಯಾಸ ಕಾರ್ಯಕ್ರಮ ನಗರದ ಬಿಎಲ್ಡಿಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಭಾನುವಾರ ನಡೆಯಿತು.
ಬಿಎಲ್ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಬಿ.ಎಂ. ಪಾಟೀಲ ವೈದ್ಯಕಿಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ವೈದ್ಯಕಿಯ ಶಾಸ ವಿಭಾಗಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಸಿಕಂದರಾಬಾದಿನ ರೇನೋವಾ ಸೌಮ್ಯ ಕ್ಯಾನ್ಸರ್ ಸೆಂಟರ್ನ ಮೆಡಿಕಲ್ ಅಂಕೋಲಾಜಿ ವಿಭಾಗದ ನಿರ್ದೇಶಕ, ಮುಖ್ಯಸ್ಥ ಡಾ. ಪಿ.ಎಸ್. ದತ್ತಾತ್ರೇಯ ಉದ್ಘಾಟಿಸಿದರು. ಡಾ. ಆರ್.ಎಸ್. ಮುಧೋಳ ಅಧ್ಯತೆ ವಹಿಸಿದ್ದರು. ವೈದ್ಯಕಿಯ ಶಾಸ ವಿಭಾಗದ ಪೊ. ಡಾ. ಆರ್.ಸಿ. ಬಿದರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಡಾ. ಸಿ. ಆರ್. ಬಿದರಿ ಸ್ಮಾರಕ ದತ್ತಿ ವತಿಯಿಂದ ನಡೆದ ಉಪನ್ಯಾಸದಲ್ಲಿ ಮುಂಬಯಿ ಮತ್ತು ಹೈದರಾಬಾದ್ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ 400 ಪ್ರತಿನಿಧಿಗಳು ಭಾಗವಹಿಸಿದ್ದರು. 1300 ಜನ ಕಾರ್ಯಕ್ರಮಕ್ಕೆ ಆನ್ಲೈನ್ ನೋಂದಣಿ ಮಾಡಿದ್ದರು.
ವಿಜಯೇಂದ್ರ ಬಿದರಿ, ಡಾ. ಆರ್.ಸಿ. ಬಿದರಿ, ಆಶಾ ಎಂ. ಪಾಟೀಲ, ಡಾ. ಶೈಲಜಾ ಬಿದರಿ, ಆಸ್ಪತ್ರೆ ವೈದ್ಯಕಿಯ ಅಧೀಕ ಡಾ. ರಾಜೇಶ ಹೊನ್ನುಟಗಿ, ಆಸ್ಪತ್ರೆ ನಿರ್ದೇಶಕ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ, ಕಾಲೇಜಿನ ಉಪಪ್ರಾಚಾರ್ಯ ಡಾ. ಎಂ.ಬಿ. ಪಾಟೀಲ, ವೈದ್ಯಕಿಯ ಶಾಸ ವಿಭಾಗದ ಮುಖ್ಯಸ್ಥ ಡಾ. ಎಸ್.ಎನ್. ಬೆಂಟೂರ, ಡಾ. ತೇಜಸ್ವಿನಿ ಮತ್ತಿತರರಿದ್ದರು.
ಡೀಮ್ಡ್ ವಿವಿ ಸಮ ಕುಲಾಧಿಪತಿ ಡಾ. ವೈ.ಎಂ. ಜಯರಾಜ್ ಸ್ವಾಗತಿಸಿದರು. ಕುಲಪತಿ ರಿಜಿಸ್ಟ್ರಾರ್ ಡಾ. ಆರ್.ವಿ. ಕುಲಕರ್ಣಿ ವಂದಿಸಿದರು.