

ಮದ್ದೂರು: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮದ್ದೂರು ತಾಲೂಕು ರೈತ ಸಂಘದ ತಾಲೂಕು ಸಮಿತಿ ಸಭೆ ತಾಲೂಕು ಅಧ್ಯಕ್ಷ ರಾಮಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.
40 ಹಳ್ಳಿಗಳ ವಿದ್ಯುತ್ ಬಾಕಿ ಮನ್ನಾ ಮಾಡಬೇಕು. ಹಿಂದಿನಂತೆ ವಿದ್ಯುತ್ ಶುಲ್ಕ ಮುಂದುವರಿಸಬೇಕು. ದರ ಹೆಚ್ಚಳ ಕೈ ಬಿಡಬೇಕು. ಸಾಲಮನ್ನಾ ಯೋಜನೆಯ ಬಾಕಿ ಮೊಬಲಗನ್ನು ಕೂಡಲೇ ಬಿಡುಗಡೆ ಮಾಡಬೇಕು. ಕಬ್ಬು ಟನ್‌ಗೆ 4,500 ರೂ. ನಿಗದಿಪಡಿಸಬೇಕು ಎಂದು ರೈತರು ಸರ್ಕಾರವನ್ನು ಒಕ್ಕೊರಲಿನಿಂದ ಒತ್ತಾಯಿಸಿದರು.
ಜು.21ರಂದು ಧಾರವಾಡದಲ್ಲಿ ನಡೆಯಲಿರುವ ರೈತ ಹುತಾತ್ಮ ದಿನಾಚರಣೆಗೆ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ತಾಲೂಕು ಯುವ ರೈತ ಸಂಘಕ್ಕೆ ಚಾಲನೆ ನೀಡಿ, ಯುವ ರೈತ ತಾಲೂಕು ಸಂಚಾಲಕ ಸಮಿತಿ ನೇಮಿಸಲಾಯಿತು. ಸದಸ್ಯರಾಗಿ ಪ್ರಸನ್ನ ಕೋಣಸಾಲೆ, ಬೋರೇಗೌಡ ಅಣ್ಣೂರು, ಹರಳಹಳ್ಳಿ ನಾಗರಾಜು, ತೊರೆಬೊಮ್ಮನಹಳ್ಳಿ ಪುನೀತ್, ಕೊಪ್ಪ ಗುರುಪ್ರಸಾದ್, ಚಾಮನಹಳ್ಳಿ ಅವಿನಾಶ್, ಕುರಿದೊಡ್ಡಿ ಪ್ರಮೋದ್, ತೂಬಿನಕೆರೆ ಸತೀಶ್, ಕಣಿಕೆಂಪನದೊಡ್ಡಿ ಬೆಟ್ಟೇಗೌಡ, ಚೊಟ್ಟನಹಳ್ಳಿ ಶ್ರೀನಿವಾಸ್, ಕೆಸ್ತೂರಿನ ಬಸವೇಗೌಡ, ಬ್ಯಾಡರಹಳ್ಳಿ ರಾಜು ಅವರನ್ನು ನೇಮಿಸಲಾಯಿತು. ಸರ್ವೋದಯ ಕರ್ನಾಟಕ ಪಕ್ಷದ ಜಿಲ್ಲಾ ಸಮಿತಿಗೆ ತಾಲೂಕಿನಿಂದ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಜಿಲ್ಲಾ ಹಿರಿಯ ಮುಖಂಡರಾದ ಬೇವಿನಕುಪ್ಪೆ ಶಿವಲಿಂಗೇಗೌಡ ಅವರಿಗೆ ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು.
ತಾಲೂಕು ಪ್ರಧಾನ ಕಾರ್ಯದರ್ಶಿ ವಿನೋದ್‌ಬಾಬು, ಖಜಾಂಚಿ ಸಿದ್ದೇಗೌಡ, ಗೌರವಾಧ್ಯಕ್ಷರಾದ ಮರಿಸ್ವಾಮಿ, ವೆಂಕಟೇಗೌಡರು, ಉಪಾಧ್ಯಕ್ಷರಾದ ದಯಾನಂದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗಪ್ಪಾಜಿ, ಜಿಲ್ಲಾ ಉಪಾಧ್ಯಕ್ಷ ಶಂಕರ್, ಖಜಾಂಚಿ ರವಿಕುಮಾರ್, ಹಿರಿಯ ಮುಖಂಡರಾದ ವರದರಾಜು, ರಾಮಣ್ಣ, ವೆಂಕಟೇಶ್, ತಾಲೂಕಿನ ಹಿರಿಯ ಹಾಗೂ ಯುವ ಕಾರ್ಯಕರ್ತರು ಭಾಗವಹಿಸಿದ್ದರು.