40 ವರ್ಷ ನಂತರ ಒಂದಾದ ದಂಪತಿ

h2-Shivaji
Published on

ಹುಬ್ಬಳ್ಳಿ: ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಕ್ಷತ್ರಿಯ ಮರಾಠಾ ಸೇವಾ ಸಮಾಜದ ವತಿಯಿಂದ ನಗರದ ಮರಾಠಾ ಸಮಾಜದ ಕಚೇರಿಯಲ್ಲಿ ವಿಶೇಷ ಸಮಾರಂಭವೊಂದನ್ನು ಆಯೋಜಿಸಿತ್ತು. 40 ವರ್ಷ ದೂರವಿದ್ದ ಸತಿ-ಪತಿಯನ್ನು ಒಂದು ಮಾಡಲಾಯಿತು.

ಸಂಭಾಜಿ ಜಾಧವ ಅವರು ನರಸುಬಾಯಿ ಸಂಭಾಜಿ ಜಾಧವ ಅವರನ್ನು ಮದುವೆಯಾಗಿದ್ದರು. ಅವರಿಗೆ ಮಗ ಮತ್ತು ಮಗಳು ಇದ್ದಾರೆ. ಆಧ್ಯಾತ್ಮದತ್ತ ಚಿತ್ತ ವಾಲಿ ಮನೆಬಿಟ್ಟಿದ್ದರು. ಈಗ ಇವರನ್ನು ಒಂದು ಮಾಡಲಾಯಿತು. ಎಪಿಎಂಸಿ ಸದಸ್ಯ ರಾಮಚಂದ್ರ ಜಾಧವ ಮಾತನಾಡಿ, ಜೀವನದಲ್ಲಿ ಇದೊಂದು ಮರೆಯಲಾಗದ ಅದ್ಭುತ ಘಟನೆ ಎಂದು ಬಣ್ಣಿಸಿದರು.

ಸಮಾಜದ ಮುಖಂಡ ಮಹೇಶ ದಾಬಡೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮನೋಹರ ಕದಂ, ಪಿ.ಪಿ. ಗಾಯಕವಾಡ, ಶಹಾಜಿ ಬೋಸಲೆ, ಕಾಶಿನಾಥ ಚೌಹಾಣ, ಮಹೇಶ ಘಾಟಗೆ, ಮಹಾಂತೇಶ ಚವ್ಹಾಣ, ಲಕ್ಷ್ಮಣ ಶಿಂಧೆ, ನಾರಾಯಣ ಮೋಹಿತೆ, ಭೀಮರಾವ್ ಪವಾರ್, ಚಂದ್ರಶೇಖರ ಪವಾರ, ಮಂಜುನಾಥ ಡಂಬಳ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net