40 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಭೂಮಿಪೂಜೆ

12blrp1
ಬೇಲೂರು ತಾಲೂಕಿನ ಯಕಶೆಟ್ಟಿಹಳ್ಳಿಯಲ್ಲಿ ರಸ್ತೆ ಕಾಮಗಾರಿಗೆ ಶಾಸಕ ಕೆ.ಎಸ್.ಲಿಂಗೇಶ್ ಭೂಮಿಪೂಜೆ ಮಾಡಿದರು.
Published on

ಬೇಲೂರು: ವಿರೋಧ ಪಕ್ಷದಲ್ಲಿದ್ದರೂ ಸಹ 1800 ಕೋಟಿ ರೂ. ಅನುದಾನ ತಂದು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.

ತಾಲೂಕಿನ ಯಕಶೆಟ್ಟಿಹಳ್ಳಿಯಲ್ಲಿ, ಆದರ್ಶ ಗ್ರಾಮ ಯೋಜನೆಯಲ್ಲಿ 40 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ನನಗೆ ಹಣ ಸಂಪಾದಿಸುವ ಹಂಬಲವಿಲ್ಲ ಜೀವನ ಮಾಡಲು ಸಾಕಗುವಷ್ಟನ್ನು ಕೃಷಿಯಲ್ಲಿ ದುಡಿಯುತ್ತಿದ್ದೇನೆ. ನನಗೆ ಕ್ಷೇತ್ರದ ಜನರ ಸೇವೆ ಮಾಡುವ ಹಂಬಲವಿದೆ. ಆದ್ದರಿಂದಲೇ ತಾರತಮ್ಯ ಮಾಡದೇ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಜನಸೇವೆಯಲ್ಲೇ ನೆಮ್ಮದಿ ಕಾಣುತ್ತಿದ್ದೇನೆ ಎಂದರು.

ಈ ಸಂದರ್ಭದಲ್ಲಿ ನಾರಾಯಣಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾವತಿ, ಜೆಡಿಎಸ್ ಮುಖಂಡರಾದ ಕನಾಯ್ಕನಹಳ್ಳಿ ಮಹದೇವ್, ಜಗದೀಶ್, ಮಧು, ಕೆಂಚಯ್ಯ, ತೀರ್ಥಾನಂದ, . ಇಂಜಿನಿಯರ್ ಸಾಗರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net