

ಮಡಿಕೇರಿ: ವಿರಾಜಪೇಟೆ ನಗರದ ಕ್ರೌನ್ಸ್ ಕ್ರಿಕೆಟರ್ಸ್ ವತಿಯಿಂದ ಕೊಡಗು ಜಿಲ್ಲೆಯಲ್ಲಿ ಪ್ರಥಮ ಭಾರಿಗೆ ಅಯೋಜಿಸಲಾಗಿರುವ 40+ ಲೆಜೆಂಡ್ ಕ್ರಿಕೆಟ್ ಪ್ರೀಮಿಯರ್ ಲೀಗ್‌ನ ವಿವಿಧ ತಂಡಗಳ ಮಾಲೀಕರು ಶನಿವಾರ ತಮ್ಮ ತಂಡದ ಜರ್ಸಿ ಬಿಡುಗಡೆ ಮಾಡಿದರು.
ನಗರದ ಸಂತ ಅನ್ನಮ್ಮ ಕಾಲೇಜು ಮೈದಾನದಲ್ಲಿ (ಏ.28) ಭಾನುವಾರದಿಂದ ಮೂರು ದಿನಗಳ ಕಾಲ 40+ ಲೆಜೆಂಡ್ ಕ್ರಿಕೆಟ್ ಪ್ರೀಮಿಯರ್ ಲೀಗ್ ಟೂರ್ನಿ ನಡೆಯಲಿದೆ. ಲೆಜೆಂಡ್ ಕ್ರಿಕೆಟ್ ಅಂಗವಾಗಿ ಕುಶಾಲನಗರದ ಮಂಜೇಶ್ ಕ್ರಿಕೇಟರ್ಸ್ ಕಾಲೇಜು ಮೈದಾನದಲ್ಲಿ ತಂಡದ ಹಿತೈಷಿಗಳಾದ ಪತ್ರಕರ್ತ ಪ್ರಭುದೇವ್ ಅವರು ಶನಿವಾರ ತಂಡದ ಅಟಗಾರರಿಗೆ ಜರ್ಸಿ ನೀಡಿದರು.
ರೇಡರ್ಸ್ ತಂಡದ ಮಾಲೀಕ ಮಂಜೇಶ್, ವ್ಯವಸ್ಥಾಪಕರಾದ ಮಹದೇವ್ ,ತಂಡದ ನಾಯಕರಾದ ಮಧನ್, ನೌಷದ್, ಆಲಿ,ಇರ್ಷಾದ್, ಅಪ್ತಾಬ್ ಎಂ.ಪಿ., ಕೆ.ಕೆ. ಜೀವನ್, ಕಿರಣ್, ನಿಷಾದ್, ವಸಂತ್, ರಶೀದ್, ನಂದೀಶ್ ಡೆನ್ನ ಮತ್ತು ಜಯಪ್ರಕಾಶ್ ಇದ್ದರು.
ಚಿಕ್ಕಪೇಟೆ ನಿವಾಸಿ ನಿವೃತ್ತ ಶಿಕ್ಷಕರಾದ ಅಲ್ಬರ್ಟ್ ಅವರ ಮನೆಯಲ್ಲಿ ರೇಡರ್ಸ್ ಕ್ರಿಕೆಟ್ ತಂಡದ ಜರ್ಸಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ಶಿಕ್ಷಕರಾದ ಆಲ್ಬರ್ಟ್ ಅವರು ತಂಡಕ್ಕೆ ಶುಭ ಹಾರೈಸಿ ತಂಡದ ಆಟಗಾರರಿಗೆ ಜರ್ಸಿ ವಿತರಣೆ ಮಾಡಿದರು. ತಂಡದ ಮಾಲೀಕರಾದ ಜಿಮ್ಮಿ ಜೋಸೆಫ್, ಸಿಬಿ ಕುರಿಯನ್ ತಂಡದ ನಾಯಕ, ಟೆರಿ ಡಿಸೆಲ್ವ, ಉಪ ನಾಯಕ ಸ್ವರೂಪ್ ಎಂ.ಸಿ. ಬಿಲ್ಟನ್, ಆಲ್ವೀನ್ ಡಿಸೋಜ, ಜೈಸನ್ ಪಾಪಚ್ಚನ್, ಸುಬ್ರಮಣಿ, ಕ್ಲಿಫರ್ಡ್ ಡಿಮೆಲ್ಲೊ, ಲಿನಿ ಕುಂಜು,ಝಬಿ, ಶಬ್ಬೀರ್,ನೌಷಾದ್, ಹಬೀಬ್ ಮುಂತಾದ ಆಟಗಾರರು ಇದ್ದರು.