40.4 ಲಕ್ಷ ರೂ. ಲಾಭದಲ್ಲಿ ವಿಶ್ವಬಂಧು ಸೊಸೈಟಿ

Vishwabandhu
Published on

ಚಿತ್ರದುರ್ಗ: ವಿಶ್ವಬಂಧು ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ 40.4 ಲಕ್ಷ ರೂ. ಲಾಭದಲ್ಲಿದೆ ಎಂದು ಸೊಸೈಟಿ ಅಧ್ಯಕ್ಷ ಜಿ.ಬಿ.ತೀರ್ಥಪ್ಪ ತಿಳಿಸಿದರು.

ಜಗಳೂರು ಮಹಲಿಂಗಪ್ಪ ಕಂಫರ್ಟ್ಸ್ ಸಭಾಂಗಣದಲ್ಲಿ ಶನಿವಾರ ನಡೆದ ಸೊಸೈಟಿಯ 2023-24ನೇ ಸಾಲಿನ 33ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.

1,264 ಸದಸ್ಯರಿದ್ದು, 2024ರ ಮಾರ್ಚ್ ಅಂತ್ಯಕ್ಕೆ 31 ಮಂದಿ ಸದಸ್ಯತ್ವ ಪಡೆದಿದ್ದಾರೆ. 21 ಮಂದಿ ಸದಸ್ಯತ್ವ ಹಿಂಪಡೆದಿದ್ದಾರೆ. ವರ್ಷಾಂತ್ಯಕ್ಕೆ ಷೇರು ಬಂಡವಾಳ 36.23 ಲಕ್ಷ ರೂ. ಇದ್ದು, ಉತ್ತಮ ವ್ಯವಹಾರ ಕಾರಣಕ್ಕೆ ಲಾಭದಲ್ಲಿ ಮುನ್ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

2024ರ ಅಂತ್ಯಕ್ಕೆ ಆಪತ್ತಿನ ನಿಧಿಯಾಗಿ 1.18 ಕೋಟಿ ರೂ. ಇರಲಿದ್ದು, ಜಿಲ್ಲಾ ಸಹಕಾರ ಬ್ಯಾಂಕಿನಲ್ಲಿ 37.53 ಲಕ್ಷ ರೂ. ರಿಸರ್ವ್ ಫಂಡ್ ಇದೆ. ಸೊಸೈಟಿ ಸದಸ್ಯರಿಗೆ ವಿವಿಧ ರೀತಿಯ ಸಾಲವಾಗಿ 7.58 ಲಕ್ಷ ರೂ. ನೀಡಿದ್ದು, ಸಕಾಲಕ್ಕೆ ಮರು ಪಾವತಿಸಿದ್ದಾರೆ. ಇದು ಉತ್ತಮ ಬೆಳವಣಿಗೆ ಎಂದರು.

ಇದೇ ವೇಳೆ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಪಡೆದ ಸದಸ್ಯರ ಮಕ್ಕಳಿಗೆ ಸನ್ಮಾನಿಸಲಾಯಿತು.

ಸೊಸೈಟಿ ಉಪಾಧ್ಯಕ್ಷ ಬಿ.ನಾಗರಾಜ್, ನಿರ್ದೇಶಕರಾದ ಎಚ್.ಎಂ.ದ್ಯಾಮಣ್ಣ ಕೋಗುಂಡೆ, ಜಿ.ಬಿ.ಶೇಖರಪ್ಪ, ಎಚ್.ಎಸ್.ಶಿವಪ್ರಸಾದ್, ಎಂ.ಸಿ.ಶೋಭಾ, ಸಿ.ಮಹೇಶ್ವರಪ್ಪ, ದಿವಾಕರ್ ಸಂಕೋಳ್, ಎಸ್.ಶೋಭಾವತಿ, ಟಿ.ರುದ್ರಪ್ಪ, ಜಿ.ಎನ್.ಶಿವಕುಮಾರ್, ಓಬಳೇಶಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net