4 ಶ್ರೀಗಂಧದ ಮರ ಕಡಿದು ಸಾಗಿಸಿದ ಕಳ್ಳರು

11mnd3(A)
Published on

ಮುಂಡಗೋಡ: ತಾಲೂಕಿನ ನ್ಯಾಸರ್ಗಿ ಗ್ರಾಮದ ರಸ್ತೆಯ ಪಕ್ಕದಲ್ಲಿದ್ದ ನಾಲ್ಕು ಶ್ರೀಗಂಧದ ಮರವನ್ನು ಸೋಮವಾರ ತಡರಾತ್ರಿಕಳ್ಳರು ಕಡಿದು ಸಾಗಿಸಿದ್ದಾರೆ.

ನ್ಯಾಸರ್ಗಿ ಕಾಲನಿಯ ಪ್ರಕಾಶ ನ್ಯಾಸರ್ಗಿ ಮತ್ತು ನ್ಯಾಸರ್ಗಿ ಪ್ಲಾಟ್​ನ ಮೋಹನ ಕುಡ್ಡಿಕೇರಿ ಎಂಬುವರ ಮನೆಯ ಹಿತ್ತಲಿನಲ್ಲಿದ್ದ ಸುಮಾರು 8-10 ವರ್ಷದ ತಲಾ ಎರಡು ಶ್ರೀಗಂಧದ ಗಿಡಗಳನ್ನು ಯಂತ್ರದಿಂದ ಕತ್ತರಿಸಿಕೊಂಡು ಹೋಗಿದ್ದಾರೆ. ಆದರೆ, ಮಧ್ಯ ಭಾಗದ ಗಂಧದ ತುಂಡು ಮಾತ್ರ ಸಾಗಿಸಲಾಗಿದ್ದು, ಟೊಂಗೆಗಳನ್ನು ಸ್ಥಳದಲ್ಲಿಯೇ ಎಸೆದು ಹೋಗಿದ್ದಾರೆ. ಮಂಗಳವಾರ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಶ್ರೀಗಂಧದ ಮರಗಳನ್ನು ಕಡಿದ ಆರೋಪಿಗಳು ನಾಪತ್ತೆಯಾಗಿರುವುದರಿಂದ ಟ್ರೇಸಿಂಗ್ ಆಪ್ ಮೂಲಕ ಆರೋಪಿಗಳ ಪತ್ತೆ ಹಚ್ಚಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. | ಸುರೇಶ ಕುಳ್ಳೊಳ್ಳಿ, ಆರ್​ಎಫ್​ಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net