

ಹುಕ್ಕೇರಿ: ಪ್ರಸಕ್ತ ಸಾಲಿನಲ್ಲಿ 4 ಲಕ್ಷ ಮೆ.ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ ಎಂದು ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ ತಿಳಿಸಿದರು.
ತಾಲೂಕಿನ ಹಿಡಕಲ್ ಡ್ಯಾಂನ ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆಯ ಕಬ್ಬು ನುರಿಸುವ ಹಂಗಾಮಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ಈ ವರ್ಷ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೈತರು ಕಬ್ಬು ಬೆಳೆದಿದ್ದು, ಕಾರ್ಖಾನೆಗೆ ಕಳುಹಿಸಬೇಕು ಎಂದು ಮನವಿ ಮಾಡಿದರು. ಘೋಡಗೇರಿಯ ಮಲ್ಲಯ್ಯ ಸ್ವಾಮೀಜಿ ಮಾತನಾಡಿ, ರೈತರು ವಾಣಿಜ್ಯ ಬೆಳೆ ಜತೆಗೆ ತಮ್ಮ ಮನೆಗೆ ಅವಶ್ಯಕವಿರುವ ವಿವಿಧ ಬೆಳೆ ಬೆಳೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ನಿಡಸೋಸಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ವಿರಕ್ತಮಠದ ಶಿವಬಸವ ಸ್ವಾಮೀಜಿ, ಕ್ಯಾರಗುಡ್ಡ ಅವಜೀಕರಮಠದ ಅಭಿನವ ಮಂಜುನಾಥ ಸ್ವಾಮೀಜಿ, ಹತ್ತರಗಿಯ ಗುರುಸಿದ್ಧ ಸ್ವಾಮೀಜಿ ಆಶೀರ್ವಚನ ನೀಡಿದರು. ಉಪಾಧ್ಯಕ್ಷ ಶಂಕರರಾವ ಬಾಂಧುರ್ಗೆ, ಮಾಜಿ ಸಚಿವ ಶಶಿಕಾಂತ ನಾಯಿಕ, ನಿರ್ದೇಶಕರಾದ ಅಣ್ಣಾಸಾಹೇಬ ಪರ್ವತರಾವ, ಬಸಗೌಡ ಪಾಟೀಲ, ಗುರು ಪಾಟೀಲ, ಅರ್ಜುನ ಪಾಟೀಲ, ಸುಭಾಷ ಪಾಟೀಲ, ಸಂಗೀತಾ ಕರಗುಪ್ಪಿ, ರಾಜಶ್ರೀ ಕವಟಗಿಮಠ, ಶ್ರೀಮಂತ ಸನ್ನಾಯಿಕ, ಶಿವಪ್ಪ ಗಸ್ತಿ, ರವೀಂದ್ರ ಪಾಟೀಲ, ಅಮರನಾಥ ಮಹಾಜನಶೆಟ್ಟಿ, ಲಗಮಣ್ಣ ಕೆಂಪಮಲಕಾರಿ, ವ್ಯವಸ್ಥಾಪಕ ನಿರ್ದೇಶಕ ಎಂ.ಎನ್.ಮಣಿ, ಉಮೇಶ ಪಾಟೀಲ ಇತರರಿದ್ದರು.