4 ರಿಂದ ಗುತ್ತಿಗೆದಾರರ ರಾಜ್ಯ ಸಮ್ಮೇಳನ

DSC_1046--0001
Published on

ಚಿತ್ರದುರ್ಗ: ಬೆಂಗಳೂರಿನ ಅರಮನೆ ಆವರಣದಲ್ಲಿ ಮಾ.4 ರಿಂದ 2 ದಿನಗಳ ಕಾಲ ರಾಜ್ಯ ಗುತ್ತಿಗೆದಾರರ ಸಂಘದ ಸಮ್ಮೇಳನ ಆಯೋಜಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಆರ್.ಮಂಜುನಾಥ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 4ರ ಬೆಳಗ್ಗೆ 10ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದು, ರಾಜ್ಯಾಧ್ಯಕ್ಷ ಡಿ.ಕೆಂಪಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ನಾನಾ ಸಚಿವರು, ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಜಿಎಸ್‌ಟಿ ಬಿಡುಗಡೆ, ಪ್ಯಾಕೇಜ್ ಗುತ್ತಿಗೆ ಇತ್ಯಾದಿ ಗುತ್ತಿಗೆದಾರರ ಸಮಸ್ಯೆಗಳಡೆ ಚರ್ಚೆ ನಡೆಯಲಿದೆ. ಬಿಲ್ ಪಾವತಿ ಬಾಕಿ, ಅಧಿಕಾರಿಗಳು ಪ್ಯಾಕೇಜ್ ಗುತ್ತಿಗೆಯನ್ನು ಬೇಕಾದವರಿಗೆ ಕೊಡುತ್ತಿರುವುದು. ಎಸ್ಸಿ, ಎಸ್ಟಿ ಗುತ್ತಿಗೆದಾರರು ಪಡೆಯಬೇಕಿರುವ ಕಾಮಗಾರಿಗಳನ್ನು ಅನ್ಯರು ಪಡೆಯುತ್ತಿರುವುದು. ಹಿಂದಿನ ಸರ್ಕಾರದಲ್ಲಿದ್ದ ಭ್ರಷ್ಟಾಚಾರ ಈಗಲೂ ಮುಂದುವರಿದಿರುವ ಕುರಿತಂತೆ ಸಿಎಂ ಗಮನಕ್ಕೆ ತಂದು ಸೂಕ್ತ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದರು.
ಜಿಲ್ಲೆಯಿಂದ 350 ಗುತ್ತಿಗೆದಾರರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಚಿತ್ರದುರ್ಗದಲ್ಲಿ ರೋಡ್ ಡಿವೈಡರ್ ನಿರ್ಮಾಣ ವಿರೋಧಿಸಿ ಸಂಘದಿಂದ ಪತ್ರ ಬರೆಯಲಾಗಿತ್ತು. ಅವೈಜ್ಞಾನಿಕವಾಗಿ ನಿರ್ಮಿಸಿರುವ ಡಿವೈಡರ್‌ಗಳನ್ನು ಈಗ ಒಡೆಯುತ್ತಿದ್ದಾರೆ. ಇದು ಅಧಿಕಾರಿಗಳಿಂದ ಆಗಿರುವ ತಪ್ಪು ಎಂದು ದೂರಿದರು.
ನಗರಸಭೆ ಮಾಜಿ ಅಧ್ಯಕ್ಷ ಕೆ.ಮಲ್ಲೇಶಪ್ಪ, ಗುತ್ತಿಗೆದಾರರಾದ ಕುಮಾರ್, ಹೇಮಂತ್, ಡಿ.ಸಿ.ವೆಂಕಟೇಶ್, ಅಜಯ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net