

ಕಾರವಾರ: ಜಿಲ್ಲೆಯ ಒಟ್ಟು ಮತ್ತೆ 88 ಜನರಿಗೆ ಕರೊನಾ ಇರುವುದು ಶುಕ್ರವಾರ ಖಚಿತವಾಗಿದೆ. ಇವರಲ್ಲಿ ಸೋಂಕಿತರ ಸಂಪರ್ಕಕ್ಕೆ ಬಂದವರೇ ಹೆಚ್ಚಿದ್ದಾರೆ. ಇಂತಹವರ ಸಂಖ್ಯೆ 63. ಅಲ್ಲದೆ, ಸೋಂಕಿತರಲ್ಲಿ ನಾಲ್ವರು ವೃದ್ಧರಿದ್ದಾರೆ.
ಹೊರ ಊರಿನಿಂದ ಬಂದ 6 ಜನರಿಗೆ, ಜ್ವರ ಇದ್ದ 7 ಜನರಿಗೆ ಸೋಂಕು ಖಚಿತವಾಗಿದೆ. 11 ಜನರ ಸೋಂಕಿನ ಮೂಲ ಪತ್ತೆಯಾಗಿಲ್ಲ. ಕುಮಟಾದಲ್ಲಿ 30, ಹೊನ್ನಾವರದಲ್ಲಿ 4, ಭಟ್ಕಳದಲ್ಲಿ 3, ಶಿರಸಿಯಲ್ಲಿ 23, ಅಂಕೋಲಾದಲ್ಲಿ 1, ಸಿದ್ದಾಪುರದಲ್ಲಿ 4, ಮುಂಡಗೋಡಿನಲ್ಲಿ 7, ಹಳಿಯಾಳದಲ್ಲಿ 14, ಜೊಯಿಡಾದಲ್ಲಿ 2 ಪ್ರಕರಣಗಳು ಪತ್ತೆಯಾಗಿವೆ.
ಕಾರವಾರ ಕ್ರಿಮ್ಸ್ನಲ್ಲಿ ಒಟ್ಟು 6 ಜನರು ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ರೋಗಿಗಳಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಮುಂಡಗೋಡಿನ ಒಬ್ಬನನ್ನು ಹುಬ್ಬಳ್ಳಿಗೆ ರವಾನಿಸಲಾಗಿದೆ.
ಕುಮಟಾದ ಹೆಗಡೆ ಕ್ರಾಸ್ನ ಹೋಟೆಲ್ 15 ಸಿಬ್ಬಂದಿಗೆ ಕರೊನಾ ಖಚಿತವಾಗಿದೆ. ಇದರಿಂದ ಹೋಟೆಲ್ ಸೀಲ್ಡೌನ್ ಮಾಡಲಾಗಿದೆ. ಕರಾವಳಿ ಕಾವಲುಪಡೆಯ ಮೂವರು ಕಾನ್ಸ್ಟೇಬಲ್ಗಳಿಗೆ, ಮೂರುಕಟ್ಟೆ ಸಮೀಪದ ಖಾಸಗಿ ಆಸ್ಪತ್ರೆ ಸಿಬ್ಬಂದಿಗೆ, ಲಡಾಖ್ನಿಂದ ಆಗಮಿಸಿದ ವಕ್ಕನಳ್ಳಿಯ ನಾಲ್ವರಿಗೆ, ಮೂರು, ದಾರೇಶ್ವರ, ಶಶಿಹಿತ್ತಲು ಗ್ರಾಮದವರಿಗೆ ಸೋಂಕು ಖಚಿತವಾಗಿದೆ. ಗೋಕರ್ಣದ ಅರ್ಚಕರೊಬ್ಬರಿಗೆ ಕರೊನಾ ಖಚಿತವಾಗಿದ್ದು, ಅವರ ಸಂಪರ್ಕಕ್ಕೆ ಬಂದ 200ಕ್ಕೂ ಅಧಿಕ ಜನರನ್ನು ಗುರುತಿಸಲಾಗಿದೆ.
4 ತಿಂಗಳ ಮಗುವಿಗೆ: ಶಿರಸಿ ನವಣಗೇರಿಯಲ್ಲಿ 4 ತಿಂಗಳ ಮಗುವಿಗೂ ಸೋಂಕು ತಗುಲಿದೆ. ಅರಣ್ಯ ವಿದ್ಯಾಲಯದ ಒಬ್ಬರಿಗೆ, ರಾಜೀವ ನಗರ, ಗಾಂಧಿ ನಗರ, ಬೀಳೂರು, ಕೊರ್ಲಕಟ್ಟಾ, ಸಾಲ್ಕಣಿ, ಕಸ್ತೂರಬಾ ನಗರ, ದಾಸನಕೊಪ್ಪ ಹಾಗೂ ಬಿಸಲಕೊಪ್ಪಗಳಲ್ಲಿ ಸೋಂಕಿತರ ಸಂಪರ್ಕಕ್ಕೆ ಬಂದವರಿಗೆ ಕರೊನಾ ಇರುವುದು ಖಚಿತವಾಗಿದೆ.
100ರ ವೃದ್ಧೆಗೂ ಸೋಂಕು: ದಾಂಡೇಲಿ ಮಾರುತಿ ನಗರದ 100 ವರ್ಷದ ಅಜ್ಜಿಗೂ ಸೋಂಕು ತಗುಲಿದೆ. ಟೌನ್ಶಿಪ್ನ ಮೂವರಿಗೆ, ಲಿಂಕ್ ರಸ್ತೆಯ ಇಬ್ಬರಿಗೆ, ಗಾಂಧಿ ನಗರದ ಇಬ್ಬರಿಗೆ, ಸುದರ್ಶನ ನಗರ, ವೆಸ್ಟ್ ಕೋಸ್ಟ್ ಕಾರ್ಖಾನೆ, ಮಾರುತಿನಗರ, ಬೈಲ್ಪಾರ್ ನಿವಾಸಿಗಳಿಗೆ ಸೋಂಕು ಖಚಿತವಾಗಿದೆ.
53 ಮಂದಿ ಗುಣಮುಖ: ಕಾರವಾರದಲ್ಲಿ 4, ಅಂಕೋಲಾದಲ್ಲಿ 15, ಕುಮಟಾದಲ್ಲಿ 12, ಹೊನ್ನಾವರದಲ್ಲಿ 5, ಶಿರಸಿ ಮತ್ತು ಸಿದ್ದಾಪುರದಲ್ಲಿ ತಲಾ ಒಬ್ಬ ಹಾಗೂ ಹಳಿಯಾಳದಲ್ಲಿ 15 ಜನರು ಬಿಡುಗಡೆ ಹೊಂದಿದ್ದಾರೆ.</