

ಹುಬ್ಬಳ್ಳಿ: ಇಲ್ಲಿಯ ಬೆಂಡಿಗೇರಿ ಠಾಣೆ ವ್ಯಾಪ್ತಿಯ ಗಣೇಶ ಕಾಲನಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೆಟ್ಲಮೆಂಟ್ ಗಂಗಾಧರ ನಗರದ ಅವಿನಾಶ ರವಿ ಕಂಜರಬಾಟ್, ಗಣೇಶಪೇಟೆಯ ಗೌಸಮುದ್ದೀನ್ ಶಬ್ಬಿರಅಹ್ಮದ ತಾಳಿಕೋಟಿ, ವೀರಾಪುರ ಓಣಿಯ ಶಿವಕುಮಾರ ರಾಜು ತುಮಕೂರ ಹಾಗೂ ಮಂಟೂರ ರಸ್ತೆ ಗಾಂಧಿ ಏಕತಾ ಕಾಲನಿಯ ಸಮೀರುಲ್ಲಾ ಮಹ್ಮದ್ ಸಾಧಿಕ್ ಬೆಂಗಳೂರು ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರಿಂದ 26,250 ರೂ. ಮೌಲ್ಯದ 1250 ಗ್ರಾಂ ಗಾಂಜಾ, 1200 ರೂ. ನಗದು, 73 ಸಣ್ಣ ಪ್ಲಾಸ್ಟಿಕ್ ಪ್ಯಾಕೆಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಬೆಂಡಿಗೇರಿ ಠಾಣೆ ಇನ್ಸ್ಪೆಕ್ಟರ್ ಅರುಣಕುಮಾರ ಸಾಳುಂಕೆ, ಪಿಎಸ್ಐ ಎಸ್.ಆರ್. ಕಿತ್ತೂರ, ಜೆ.ಸಿ. ರಜಪೂತ, ಎಚ್.ಎಂ. ನಾಯ್ಕ, ಪಿ.ಎಸ್. ತಗಡಿನಮನಿ, ಎಸ್.ಎಂ. ತಿರಕಣ್ಣವರ, ವಿ.ಪಿ. ಭೋವಿ, ಎಂ.ಡಿ. ರಾಠೋಡ್, ಡಿ.ಆರ್. ಪಮ್ಮಾರ, ಮಂಜುನಾಥ ಯಲ್ಲಕ್ಕನವರ, ಚಂದ್ರು ಲಮಾಣಿ, ವಿ.ಆರ್. ಸುರವೆ, ಜೆ.ಡಿ. ಮಡಿವಾಳರ ಅವರು ದಾಳಿ ನಡೆಸಿದ್ದರು. ಈ ಬಗ್ಗೆ ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ.