‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ಸ್ಥಾನ ಪಡೆದ ಮೈಸೂರಿನ 4 ವರ್ಷದ ಪೋರಿ

4-year-old girl from Mysore finds place in ‘India Book of Records’
Published on

ಮೈಸೂರು: ದೇಶದ ಎಲ್ಲ ರಾಜ್ಯಗಳು ಮತ್ತು ಅವುಗಳ ರಾಜಧಾನಿಗಳ ಹೆಸರುಗಳನ್ನು ಫಟಾಫಟ್ ಅಂತ ಹೇಳುವ ನಗರದ 4 ವರ್ಷದ ಸಾರ ರೋಮಿಯೋ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ಸ್ಥಾನ ಪಡೆದುಕೊಂಡಿದ್ದಾಳೆ.

ಜೆ.ಪಿ.ನಗರದ ನಿವಾಸಿ ಮಾಧುರಿ ಮತ್ತು ರೋಮಿಯೋ ಟೈಸನ್ ದಂಪತಿಯ ಪುತ್ರಿ ಸಾರ ರೋಮಿಯೋ ಈ ಸಾಧನೆ ತೋರಿದ ಬಾಲೆ. ಈಕೆ ಅತಿ ಕಡಿಮೆ ವಯಸ್ಸಿಗೆ (4 ವರ್ಷ 6 ತಿಂಗಳು) 40 ಸೆಕೆಂಡ್‌ಗಳಲ್ಲಿ ದೇಶದ ಎಲ್ಲ ರಾಜ್ಯಗಳು ಹಾಗೂ ಅವುಗಳ ರಾಜಧಾನಿಯ ಹೆಸರನ್ನು ಹೇಳಿ ದಾಖಲೆ ಬರೆದಿದ್ದಾಳೆ. ಈ ವಿಚಾರವನ್ನು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪಾಲಕರಾದ ಮಾಧುರಿ ಮತ್ತು ರೋಮಿಯೋ ಟೈಸನ್ ಹಾಗೂ ಚಿತ್ರಕಲಾ ಶಿಕ್ಷಕ ಬಿ.ಕಿರಣ್ ಕುಮಾರ್ ಹಂಚಿಕೊಂಡರು.

ತನ್ನ ಸೋದರತ್ತೆ ಮರಿಯಾ ಶೈನಿ ಅವರು ಮನೆಯಲ್ಲಿ ಸಂಜೆ ವೇಳೆ ಎಲ್‌ಕೆಜಿಯಿಂದ 8ನೇ ತರಗತಿವರೆಗಿನ ಮಕ್ಕಳಿಗೆ ಮನೆಪಾಠ ಮಾಡುತ್ತಾರೆ. ಮನೆಯಲ್ಲಿ ಆಟವಾಡುತ್ತಲೇ ಮನೆಪಾಠವನ್ನು ಆಲಿಸಿದ ಸಾರ ದೇಶದ ಎಲ್ಲ ರಾಜ್ಯಗಳು ಮತ್ತು ಅವುಗಳ ರಾಜಧಾನಿಗಳ ಹೆಸರುಗಳನ್ನು ಕಂಠಪಾಠ ಮಾಡಿಕೊಂಡು ಈ ಸಾಧನೆ ಮಾಡಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net