

ಗಜೇಂದ್ರಗಡ: ತಾಲೂಕಿನ ಹಳ್ಳಗಳ ಒಡಲನ್ನು ಬಗೆದು ಅಕ್ರಮ ಮರಳು ಸಾಗಿಸುತ್ತಿದ್ದ ನಾಲ್ಕು ಟ್ರ್ಯಾಕ್ಟರ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅಕ್ರಮವಾಗಿ ಸಾಗಿಸುತ್ತಿದ್ದ ಟ್ರ್ಯಾಕ್ಟರ್ಗಳನ್ನು ವಶಕ್ಕೆ ಪಡೆದು ಒಂದು ಟ್ರ್ಯಾಕ್ಟರ್ಗೆ 10 ಸಾವಿರ ರೂ, ನಂತೆ ದಂಡ ವಿಧಿಸಿ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಪಿಎಸ್ಐ ಸೋಮನಗೌಡ ಗೌಡ್ರ ತಿಳಿಸಿದ್ದಾರೆ.