

ಚಿತ್ರದುರ್ಗ: ನದಿ ನೀರು ಹಂಚಿಕೆ ವಿವಾದಗಳ ಪರಿಹಾರಕ್ಕಾಗಿ ಕೇಂದ್ರ ಮತ್ತು ದೇಶದ ಎಲ್ಲ ರಾಜ್ಯ ಸರ್ಕಾರಗಳು ಹೊಸ ಚಿಂತನೆಯನ್ನು ನಡೆಸಬೇಕಿದೆ ಎಂದು ಡಾ. ಶ್ರೀ ಶಿವಮೂರ್ತಿ ಶಿವಾಚಾರ‌್ಯ ಸ್ವಾಮೀಜಿ ಹೇಳಿದರು.
ಸಿರಿಗೆರೆಯಲ್ಲಿ ಭಾನುವಾರ ಹಮ್ಮಿಕೊಡಿದ್ದ ಶ್ರೀ ಶಿವಕುಮಾರ ಶಿವಾಚಾರ‌್ಯ ಸ್ವಾಮೀಜಿ ಅವರ 31ನೇ ಶ್ರದ್ಧಾಂಜಲಿ ಸಮಾರಂಭ ಹಾಗೂ ರೈತರ ಸಮಾವೇಶ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಕರ್ನಾಟಕ ಸರ್ಕಾರ ರೈತರಿಗೆ ಜಲಭಾಗ್ಯ ಗ್ಯಾರಂಟಿ ಕೊಡಬೇಕು. ಫಲಾನುಭವಿಗಳಿಗೆ ಜಮೀನು ಸರ್ವೇ ಕೆಲಸ ಕೊಟ್ಟು ಯುವ ನಿಧಿ ಯೋಜನೆ ಜಾರಿಗೊಳಿಸಬೇಕು. ಗೃಹಲಕ್ಷ್ಮೀ ಯೋಜನೆ ಮಾಸಿಕ ಮೊತ್ತ 4 ಸಾವಿರ ರೂ. ಹೆಚ್ಚಿಸಬೇಕೆಂದು ಹೇಳಿದರು.