

ಬೆಂಗಳೂರು: ರಾಜ್ಯದ ಪರ್ವಿುಟ್ ಪಡೆಯದೆ ಅಂತಾರಾಜ್ಯ ಸಂಚಾರ ಮಾಡುತ್ತಿದ್ದ 4 ಬಸ್ಗಳನ್ನು ಯಲಹಂಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಸಾರಿಗೆ ಅಧಿಕಾರಿಗಳು ಶನಿವಾರವಷ್ಟೆ 15 ಲಕ್ಷ ರೂ. ತೆರಿಗೆ ವಂಚನೆ ಮಾಡಿದ್ದ ಬೆಂಜ್ ಕಾರನ್ನು ವಶಕ್ಕೆ ಪಡೆದಿದ್ದರು. ಸೋಮವಾರ ಹೈದರಾಬಾದ್ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿ ಬಸ್ಗಳನ್ನು ಜಪ್ತಿ ಮಾಡಿದ್ದಾರೆ.
ಎಆರ್, ಎನ್ಎಲ್ ನೋಂದಣಿ: ವಶಕ್ಕೆ ಪಡೆಯಲಾಗಿ ರುವ ಬಸ್ಗಳು ಜಬ್ಬಾರ್ ಮತ್ತು ಆರೆಂಜ್ ಸಂಸ್ಥೆಯ ನಾಮಫಲಕ ಹೊಂದಿದ್ದು, ನಾಗಲ್ಯಾಂಡ್ ಮತ್ತು ಅರುಣಾಚಲಪ್ರದೇಶದಲ್ಲಿ ನೋಂದಣಿ ಮಾಡಲಾಗಿದೆ. ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಾಶ್ ಮತ್ತು ವಾಹನ ನಿರೀಕ್ಷಕ ರಾಜ್ಕುಮಾರ್ ಅವರಿದ್ದ ತಂಡ ಪರಿಶೀಲನೆ ನಡೆಸಿದ ವೇಳೆ ಬಸ್ ಚಾಲಕರ ಬಳಿ ರಾಜ್ಯದ ಪರ್ವಿುಟ್ ಇಲ್ಲದಿರುವುದು ತಿಳಿದುಬಂದಿದೆ. ಇದೀಗ ಬಸ್ ಮಾಲೀಕರಿಗೆ ದಾಖಲೆ ಸಲ್ಲಿಸುವಂತೆ ಯಲಹಂಕ ಆರ್ಟಿಒದಿಂದ ನೋಟಿಸ್ ನೀಡಲಾಗಿದೆ. ದಾಖಲೆ ಸಲ್ಲಿಸಿದ ನಂತರ, ತೆರಿಗೆ ಎಷ್ಟು ಬಾಕಿ ಇದೆ ಎಂಬುದನ್ನು ಪರಿಶೀಲಿಸಲಾಗುತ್ತದೆ. ಒಂದು ವೇಳೆ ದಾಖಲೆಗಳಿಲ್ಲದಿದ್ದರೆ ಅದಕ್ಕೆ ಎಷ್ಟು ತೆರಿಗೆ ಮತ್ತು ದಂಡ ವಿಧಿಸಬೇಕು ಎಂಬುದನ್ನು ಲೆಕ್ಕ ಹಾಕಿ ವಸೂಲಿ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ವಾಹನ ತೆರಿಗೆ ವಂಚನೆ ಸೇರಿ ಸಾರಿಗೆ ಇಲಾಖೆ ನಿಯಮ ಉಲ್ಲಂಘಿಸಿ ಸಂಚರಿಸುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಕಾರ್ಯಾಚರಣೆ ವೇಳೆ ನಾಲ್ಕು ಬಸ್ಗಳನ್ನು ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆ ಮುಂದುವರಿಯಲಿದೆ. | ಪ್ರಕಾಶ್ ಯಲಹಂಕ ಪ್ರಾದೇಶಿಕ ಸಾರಿಗೆ ಅಧಿಕಾರಿ