ಪ್ರತಿ ಯೂನಿಟ್‌ಗೆ 4 ರೂ. ಹೆಚ್ಚು ನೀಡಿ ಹಣ ಲೂಟಿ: ಎಂ.ಲಕ್ಷ್ಮಣ್

lakshman (2)
Published on


ಮೈಸೂರು: ರಾಜ್ಯ ಸರ್ಕಾರವು ಖಾಸಗಿ ವಿದ್ಯುತ್ ಕಂಪನಿಗಳಿಂದ ವಿದ್ಯುತ್ ಖರೀದಿಸುವ ವೇಳೆ ನಿಗದಿತ ದರಕ್ಕಿಂತಲೂ ಪ್ರತಿ ಯೂನಿಟ್‌ಗೆ 4 ರೂ. ಅಧಿಕ ಹಣ ಪಾವತಿಸಿ ಸಾವಿರಾರು ಕೋಟಿ ಅವ್ಯವಹಾರ ನಡೆಸಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.


ವಿದ್ಯುತ್‌ಚ್ಛಕ್ತಿ ರೆಗ್ಯೂಲೆಟಿಂಗ್ ಕಾಯ್ದೆ ಪ್ರಕಾರ ವರ್ಷಕ್ಕೆ ಕೇವಲ ಒಂದು ಸಲ ಮಾತ್ರ ವಿದ್ಯುತ್ ಬೆಲೆ ಏರಿಕೆ ಮಾಡಬಹುದು ಎಂಬ ನಿಯಮವಿದ್ದರೂ, ರಾಜ್ಯ ಬಿಜೆಪಿ ಸರ್ಕಾರ ಮೂರು ವರ್ಷಗಳಲ್ಲಿ ಸುಮಾರು 6 ಬಾರಿ ದರ ಹೆಚ್ಚಳ ಮಾಡುವ ಮೂಲಕ ಬಡ ಜನರನ್ನು ಲೂಟಿ ಮಾಡುತ್ತಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.


ರಾಜ್ಯದಲ್ಲಿ ಥರ್ಮಲ್ ಪವರ್, ಹೈಡ್ರೋ ಪವರ್, ಸೋಲಾರ್ ಪವರ್ ಹೀಗೆ ವಿವಿಧ ಮೂಲಗಳ ವಿದ್ಯುತ್ ಉತ್ಪಾದನೆ ಘಟಕಗಳಿಂದ ವಾರ್ಷಿಕ ಸುಮಾರು 15 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಸಾಮರ್ಥ್ಯವಿದೆ. ಆದರೆ ನಾವು ಉತ್ಪಾದನೆ ಮಾಡುತ್ತಿರುವುದು ಕೇವಲ 6708 ಮೆಗಾವ್ಯಾಟ್ ಮಾತ್ರ. ಕೇಂದ್ರದಿಂದ ರಾಜ್ಯಕ್ಕೆ 3,754 ಮೆಗಾವ್ಯಾಟ್ ವಿದ್ಯುತ್ ಪೂರೈಕೆ ಆಗುತ್ತಿದೆ. ಆದರೂ 4300 ಮೆಗಾವ್ಯಾಟ್ ವಿದ್ಯುತ್ ಕೊರತೆ ಇದೆ ಸರ್ಕಾರ ಬಿಂಬಿಸುತ್ತಿದೆ ಎಂದು ಹೇಳಿದರು.


ಖಾಸಗಿ ಕಂಪನಿಗಳು ಉತ್ಪಾದನೆ ಮಾಡುವ ಒಂದು ಯೂನಿಟ್ ವಿದ್ಯುತ್‌ಗೆ 6.80 ಪೈಸೆ ಪಾವತಿಸಿ ಖಾಸಗಿ ಅವರಿಂದ ಖರೀದಿ ಮಾಡಲಾಗುತ್ತಿದೆ. ಆದರೆ ಕೇಂದ್ರ ವಿದ್ಯುತ್ ರೆಗ್ಯೂಲೆಟ್ ಕಾಯ್ದೆ ಪ್ರಕಾರ ಖಾಸಗಿಯವರಿಂದ ಖರೀದಿಸುವ ವಿದ್ಯುತ್ ಬೆಲೆ 4.70 ಪೈಸೆ ಮೀರಬಾರರದು ಎಂದು ಕಾನೂನಿದ್ದರೂ, ಒಂದು ಯೂನಿಟ್‌ಗೆ 2.10 ಪೈಸೆಗೆ ಅಧಿಕ ಹಣ ಪಾವತಿಸಿ ವಿದ್ಯುತ್ ಖರೀದಿಸಿ ಮಾಡಲಾಗುತ್ತಿದ್ದು, ಖರೀದಿಯಿಂದ ಸಿಗುವ ಕನಿಷ್ಠ 1 ರೂ. ಕಮಿಷನ್ ಹಣವನ್ನು ಇಂಧನ ಸಚಿವ ಸುನೀಲ್ ಮತ್ತು ಸಿಎಂ ಪಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net