ಲೀಲಾವತಿಗೆ 4 ಪದಕ

16 Dwd 4
Published on

ಧಾರವಾಡ: ಮಾಸ್ಟರ್ ಗೇಮ್ಸ್ ಅಸೋಸಿಯೇಷನ್ ಕರ್ನಾಟಕದಿಂದ ನಗರದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕರ್ನಾಟಕ ಓಪನ್ ನ್ಯಾಷನಲ್ ಮಾಸ್ಟರ್ ಗೇಮ್ಸ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಲೀಲಾವತಿ ಹೋಗಾಡಿ 4 ಪದಕ ಗೆದ್ದಿದ್ದಾರೆ. 65 ವರ್ಷ ವಯೋಮಾನ ವಿಭಾಗದಲ್ಲಿ ಲೀಲಾವತಿ ಹೋಗಾಡಿ ಅವರು ಟ್ರಿಪಲ್ ಜಂಪ್ ಮತ್ತು 200 ಮೀ. ಓಟದಲ್ಲಿ ಸ್ವರ್ಣ ಪದಕ, 100 ಮೀ. ಓಟದಲ್ಲಿದ ಬೆಳ್ಳಿ ಮತ್ತು 400 ಮೀ. ರಿಲೇ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net