ನಕಲಿ ಕೋವಿಡ್‌ ಟೆಸ್ಟ್‌ ವರದಿ, ಕೇರಳದ ನಾಲ್ವರ ಬಂಧನ

Published on

ಕೇರಳದಿಂದ ಕರ್ನಾಟಕಕ್ಕೆ ತಲಪಾಡಿ ಗಡಿ ಚೆಕ್‌ಪೋಸ್ಟ್‌ ಮೂಲಕ ನಕಲಿ ಆರ್‌ಟಿ-ಪಿಸಿಆರ್‌ ಟೆಸ್ಟ್‌ ವರದಿಯೊಂದಿಗೆ ಪ್ರವೇಶಿಸಲು ಯತ್ನಿಸಿದ ನಾಲ್ವರನ್ನು ಮಂಗಳೂರು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾರಿನಲ್ಲಿ ಆಗಮಿಸಿದ್ದ ಕಾಸರಗೋಡು ಜಿಲ್ಲೆಯ ನಿವಾಸಿಗಳಾದ ಆದಿಲ್‌, ಇಸ್ಮಾಯಿಲ್‌, ಬೈಕ್‌ನಲ್ಲಿ ಬಂದಿದ್ದ ಹನೀನ್‌ ಮತ್ತು ಬಸ್‌ ಮೂಲಕ ಬಂದಿದ್ದರು. ತಲಪಾಡಿಯಲ್ಲಿರುವ ಆರೋಗ್ಯ ಇಲಾಖೆ ಚೆಕ್‌ಪೋಸ್ಟ್‌ನಲ್ಲಿ ನಕಲಿ ವರದಿ ತೋರಿಸಿ ಒಳಬರುವ ಯತ್ನ ಮಾಡಿದ್ದರು, ಅವರನ್ನು ಬಂಧಿಸಿರುವ ತಲಪಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net