4 ತಾಸಿನ ಮಳೆಗೆ ತುಂಗಾ ತೀರದಲ್ಲಿ ನೆರೆ

sri- rain
ಶೃಂಗೇರಿಯಲ್ಲಿ ಮಳೆ ಅಬ್ಬರದಿಂದ ತುಂಗಾ ನದಿ ನೆರೆ ಬಂದಿರುವುದು.
Published on

ಶೃಂಗೇರಿ: ತಾಲೂಕಿನಲ್ಲಿ ಸೋಮವಾರ ರಾತ್ರಿ ನಿರಂತವಾಗಿ ನಾಲ್ಕು ಗಂಟೆಗಳ ಕಾಲ ಸುರಿದ ಮಳೆಯಿಂದ ಜನಜೀವನ ಮತ್ತೆ ಅಸ್ತವ್ಯಸ್ತವಾಗಿದೆ. ಮಂಗಳವಾರ ಮತ್ತೆ ಮಳೆ ಅಬ್ಬರಿಸಿತು.

ಮಳೆಯಿಂದ ತುಂಗಾ ನದಿಯ ನೀರಿನ ಹರಿವು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿ ಗಾಂಧಿ ಮೈದಾನ ರಸ್ತೆ, ವಾಹನ ನಿಲುಗಡೆ ಪ್ರದೇಶ, ಕುರುಬಕೇರಿ ರಸ್ತೆ ಮುಳುಗಡೆಯಾಗಿದೆ. ಮಠದ ನರಸಿಂಹವನ ಜಲಾವೃತಗೊಂಡಿದೆ. ಕುರುಬಕೇರಿಯಲ್ಲಿ ನೀರು ತುಂಬಿ ತಗ್ಗು ಪ್ರದೇಶ ಜಲದಿಗ್ಬಂಧನವಾಗಿ ಆರು ಜನರನ್ನು ಅಗ್ನಿಶಾಮಕದಳದವರು ರಕ್ಷಿಸಿದ್ದಾರೆ. ಕುರುಬಕೇರಿಯ 20ಕ್ಕೂಹೆಚ್ಚು ಅಂಗಡಿಗಳನ್ನು ಮುಚ್ಚಲಾಗಿದೆ. ನದಿಯ ಕಡೆ ಜನರು ಹೋಗದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net