

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕರ್ನಾಟಕ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಇಲ್ಲಿನ ರಿಜ್ವಾನಾ ಎಂ. ಶಿಕಾರಿ ಎಂ.ಎಸ್‌ಸಿ ಸೂಕ್ಷ್ಮಜೀವವಿಜ್ಞಾನ ವಿಭಾಗದಲ್ಲಿ 4 ಚಿನ್ನದ ಪದಕ ಪಡೆದಿದ್ದಾಳೆ. ಮಾವಿನ ವ್ಯಾಪಾರಿಯ ಮಗಳಾದ ಈಕೆ ಬೋಧನೆ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ಮುಂದುವರಿಯುವ ಇಂಗಿತ ವ್ಯಕ್ತಪಡಿಸಿದ್ದಾಳೆ. ಗಂಗೂಬಾಯಿ ಆರ್. ಪಾಟೀಲ, ವಸುದೇವ ರಘುನಾಥ ಕಸಬೇಕರ ಮುರುಗೆಪ್ಪ ಚಿಗಟೇರಿ ಹಾಗೂ ಪ್ರೊ. ಬಿ.ಬಿ. ಕಲಿವಾಳ ಅವರು ನೀಡಿದ ಬಂಗಾರದ ಪದಕ ಪಡೆದು ಕೀರ್ತಿ ತಂದಿದ್ದಾಳೆ.