4 ಎಕರೆ ಅಡಕೆ ತೋಟಕ್ಕೆ ಬೆಂಕಿ

12 anr 14
ಮುದ್ದಿನಕೊಪ್ಪದಲ್ಲಿ ಅಡಕೆ ತೋಟಕ್ಕೆ ಬೆಂಕಿ ಬಿದ್ದು ಸುಟ್ಟು ಹೋಗಿರುವುದು.
Published on

ಆಯನೂರು: ಮುದ್ದಿನಕೊಪ್ಪದಲ್ಲಿ ಭಾನುವಾರ ನಾಲ್ಕು ಎಕರೆ ಅಡಕೆ ತೋಟ ಬೆಂಕಿ ಅವಘಡದಲ್ಲಿ ಕರಕಲಾಗಿದೆ. ಮುದ್ದಿನಕೊಪ್ಪ ಗ್ರಾಮದ ಹರೀಶ್ ಅವರ 1.26 ಎಕರೆ, ಮಂಜುನಾಥ್ ಅವರ 2 ಎಕರೆ ಅಡಕೆ ಗಿಡಗಳು ಸಂಪೂರ್ಣ ಸುಟ್ಟು ಹೋಗಿವೆ. ಅಗ್ನಿಶಾಮಕ ದಳದವರು ತಡವಾಗಿ ಸ್ಥಳಕ್ಕೆ ಆಗಮಿಸಿದ್ದರಿಂದ ಅಡಕೆ ಗಿಡಗಳು ಹಾಗೂ ನೀರಿಗಾಗಿ ಅಳವಡಿಸಲಾಗಿದ್ದ ಡ್ರಿಪ್ ಪೈಪ್‌ಲೈನ್, ಸ್ಪ್ರಿಂಕ್ಲರ್‌ಗಳು ಸುಟ್ಟುಹೋದವು. ತೋಟಗಾರಿಕೆ ಇಲಾಖೆ ಅಧಿಕಾರಿ ರಾಜು ಗೌಡ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net