4ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ

6 HBH 02
ಹಗರಿಬೊಮ್ಮನಹಳ್ಳಿ ಪಟ್ಟಣದ ರಾಮನಗರದಲ್ಲಿನ ತೇರುಬೀದಿಯ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ಕೆ.ನೇಮಿರಾಜ ನಾಯ್ಕ ಬುಧವಾರ ಪರಿಶೀಲಿಸಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಬದಾಮಿ ಮೃತ್ಯುಂಜಯ, ಕನ್ನಿಹಳ್ಳಿ ಚಂದ್ರಶೇಖರ ಇತರರಿದ್ದರು.
Published on

ಹಗರಿಬೊಮ್ಮನಹಳ್ಳಿ: ಪಟ್ಟಣದ ರಾಮನಗರದಲ್ಲಿ ಕೈಗೊಂಡ ತೇರುಬೀದಿ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ಶಾಸಕ ಕೆ.ನೇಮಿರಾಜ ನಾಯ್ಕ ಬುಧವಾರ ಭೇಟಿ ನೀಡಿ, ಕಾಮಗಾರಿ ಪರಿಶೀಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮೊದಲಿನಿಂದಲೂ ತೇರು ಬೀದಿ ರಸ್ತೆ ಅವೈಜ್ಞಾನಿಕದಿಂದ ಕೂಡಿತ್ತು. ಅದರ ಮರು ನಿರ್ಮಾಣಕ್ಕೆ 4ಕೋಟಿ ರೂ.ಗಳ ವೆಚ್ಚದಲ್ಲಿ ಸಿಸಿ ರಸ್ತೆ ಸೇರಿದಂತೆ ಎರಡೂ ಕಡೆ, ಚರಂಡಿ ನಿರ್ಮಾಣ ಮೊಟ್ಟಮೊದಲ ಬಾರಿಗೆ ಯುಜಿಡಿ, ರಸ್ತೆಯ ಎರಡೂ ಕಡೆ ಸಿಹಿ ನೀರು ಮತ್ತು ಸಪ್ಪೆ ನೀರಿನ ಎಚ್‌ಡಿ ಪೈಪ್‌ಗಳ ಅಳವಡಿಕೆ, ಅಕ್ಕ ಪಕ್ಕದಲ್ಲಿ ಗಿಡಗಳನ್ನು ನೆಡಲಾಗುವುದು.

ವಿದ್ಯುತ್ ಕೇಬಲ್ ಮತ್ತು ದೀಪಗಳು ಅಳವಡಿಸಲಾಗುವುದು ಎಂದರು. ಜೆಡಿಎಸ್ ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಮುಖಂಡರಾದ ಬದಾಮಿ ಮೃತ್ಯುಂಜಯ, ಕನ್ನಿಹಳ್ಳಿ ಚಂದ್ರಶೇಖರ, ಹೋಟೆಲ್ ಸಿದ್ದರಾಜು, ಭೋವಿ ಬಸವರಾಜ, ಬ್ಯಾಟಿ ನಾಗರಾಜ, ಹಂಪಾಪಟ್ಟಣದ ಕೊಟ್ರೇಶ, ಶ್ರೀ ಶೈಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net