ರಂಗಾಯಣದಲ್ಲಿ ಚಾಮಶೆಟ್ಟಿ ರಚನೆಯ 4 ಕೃತಿಗಳು ಬಿಡುಗಡೆ

Rangayana
Published on

ಮೈಸೂರು: ರಂಗಾಯಣ, ಸಂವಹನ ಪ್ರಕಾಶನ, ಕನ್ನಡ ಸಾಹಿತ್ಯ ಕಲಾ ಕೂಟ ವತಿಯಿಂದ ನಗರದ ರಂಗಾಯಣದ ಬಿ.ವಿ. ಕಾರಂತ ರಂಗಚಾ ವಡಿಯಲ್ಲಿ ಭಾನುವಾರ ಸಿ. ಚಾಮಶೆಟ್ಟಿ ರಚನೆಯ ‘ನಾಟಕ ಚಕ್ರ’, ‘ಹನುಮನ ಸೀತಾನ್ವೇಷಣೆ ಮತ್ತು ಸಂತ ರವಿದಾಸರು’, ‘ಸಮನ್ವಿತ’, ‘ತ್ರಿವರ್ಣ ಕಾವ್ಯ ಸಂಕಲನ’ ಕೃತಿಗಳ ಬಿಡುಗಡೆ ಸಮಾರಂಭ ನಡೆಯಿತು.

ಕೃತಿಗಳನ್ನು ಬಿಡುಗಡೆ ಮಾಡಿದ ಜೆಎಸ್‌ಎಸ್ ಮಹಾವಿದ್ಯಾಪೀಠದ ಪ್ರಕಟಣಾ ವಿಭಾಗದ ನಿರ್ದೇಶಕ ಪ್ರೊ. ಮೊರಬದ ಮಲ್ಲಿಕಾರ್ಜುನ ಮಾತನಾಡಿ, ಚಾಮಶೆಟ್ಟಿ ಅವರ ಕೃತಿಗಳು ಪ್ರತಿಯೊಬ್ಬರನ್ನು ಆಧ್ಯಾತ್ಮಿಕ ಕಡೆಗೆ ಸೆಳೆಯುವಂತೆ ಮಾಡುತ್ತದೆ. ಇಂದಿನ ಹಲವು ತಣ್ಣಗಳಿಂದ ಹೊರ ಬರಲು ಈ ಕೃತಿಗಳು ಸಹಕಾರಿಯಾಗಿವೆ ಎಂದು ಹೇಳಿದರು.

ವೇದಿಕೆಯಲ್ಲಿ ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ, ರಂಗಕಲಾವಿದ ಎಲ್.ಮಲ್ಲಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಎಂ. ಚಂದ್ರಶೇಖರ್, ಪ್ರಕಾಶಕ ಡಿ.ಎನ್. ಲೋಕಪ್ಪ, ಹಿರಿಯ ರಂಗಕರ್ಮಿ ಡಾ.ಎಚ್.ಎ. ಪಾರ್ಶ್ವನಾಥ್, ಕವಯತ್ರಿ ಎನ್. ಕೆರೋಡಿ ಲೋಲಾಕ್ಷಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net