ಆಕಸ್ಮಿಕ ಬೆಂಕಿ ಬಿದ್ದು 4 ಎಕರೆ ಅರಣ್ಯ ನಾಶ

29blrp2
Published on

ಬೇಲೂರು: ತಾಲೂಕಿನ ಪ್ರಸಾದಿಹಳ್ಳಿ ಸಮೀಪದ ಅರಣ್ಯ ಪ್ರದೇಶಕ್ಕೆ ಶನಿವಾರ ಆಕಸ್ಮಿಕ ಬೆಂಕಿ ಬಿದ್ದು, ನಾಲ್ಕು ಎಕರೆ ಅರಣ್ಯ ಸುಟ್ಟಿದ್ದು, ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದರಿಂದ ಹೆಚ್ಚಿನ ಅವಘಡ ತಪ್ಪಿದೆ.

ಬೇಲೂರು ತಾಲೂಕಿನ ಪ್ರಸಾದಿಹಳ್ಳಿ ಗ್ರಾಮದ ಸಮೀಪ 20 ಎಕರೆ ಅರಣ್ಯ ಪ್ರದೇಶವಿದ್ದು ಆಕಸ್ಮಿಕ ಬೆಂಕಿಯಿಂದ ಅಂದಾಜು 3 ರಿಂದ 4 ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ಸುಟ್ಟು ಹೋಗಿದೆ. ಬೇಸಿಗೆಯಾದ್ದರಿಂದ ಬೆಂಕಿ ಬಿದ್ದು ಸುಟ್ಟು ಹೋಗುತ್ತಿತ್ತು. ಈ ಸಂದರ್ಭ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ನೀರು ಹಾಕಿ ಬೆಂಕಿಯನ್ನು ನಂದಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದ್ದು, ಯಾವುದೇ ಅವಘಡ ಸಂಭವಿಸಿಲ್ಲ.

ಈ ಸಂದರ್ಭ ಮಾತನಾಡಿದ ಗ್ರಾಪಂ ಸದಸ್ಯ ಚಂದನ್, ಅರಣ್ಯ ಪದೇಶದ ಅಂಚಿನಲ್ಲಿ ಕಿಡಿಗೇಡಿಗಳು ಬೆಂಕಿ ಹಾಕಿದ್ದರಿಂದ ಕೆಲ ಎಕರೆಗಳಷ್ಟು ಅರಣ್ಯ ಪ್ರದೇಶ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದೆ. ಆದರೆ, ಗ್ರಾಮಸ್ಥರು ಬೆಂಕಿಯನ್ನು ನಂದಿಸಲು ಮುಂದಾದರೂ ಸಹ ಸಾಧ್ಯವಾಗಲಿಲ್ಲ. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸುಟ್ಟು ಹೋಗುತಿದ್ದ ಅರಣ್ಯ ಪ್ರದೇಶವನ್ನು ನಂದಿಸುವಲ್ಲಿ ಯಶಸ್ವಿಯಾದರು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net