

ಹುಬ್ಬಳ್ಳಿ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಕೀಲಿ ಮುರಿದು ಒಳ ಪ್ರವೇಶಿಸಿದ ಕಳ್ಳರು, ನಗ-ನಗದು ಸಮೇತ ಕಳವು ಮಾಡಿದ ಘಟನೆ ಇಲ್ಲಿಯ ಗೋಕುಲ ರಸ್ತೆಯ ಪದ್ಮರಾಜ ನಗರದಲ್ಲಿ ನಡೆದಿದೆ.
ನಿವೃತ್ತ ನೌಕರ ಮಾರುತಿ ಪಲ್ಲಾಟಿ ಎಂಬುವವರು ಮನೆಗೆ ಬೀಗ ಹಾಕಿ ಚಿತ್ರದುರ್ಗಕ್ಕೆ ಹೋಗಿದ್ದರು. ಈ ವೇಳೆ ಮನೆಯ ಕೀಲಿ ಮುರಿದ ಕಳ್ಳರು, ಸೇಫ್ ಲಾಕರ್‌ನಲ್ಲಿದ್ದ 72.9 ಗ್ರಾಂ ಚಿನ್ನ ಹಾಗೂ 30 ಗ್ರಾಂ ತೂಕದ ಬೆಳ್ಳಿ ಆಭರಣ, 1.07 ಲಕ್ಷ ರೂ. ನಗದು ಸಮೇತ ಒಟ್ಟು 4.73 ಲಕ್ಷ ರೂ. ಕಳವು ಮಾಡಲಾಗಿದೆ ಎಂದು ಮಾರುತಿ ದೂರಿನಲ್ಲಿ ತಿಳಿಸಿದ್ದಾರೆ. ಗೋಕುಲ ರೋಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.