

ಬೆಂಗಳೂರು : ಬೆಂಗಳೂರು ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 4.40 ಕೋಟಿ ರೂ. ಒಳಗೊಂಡ 12 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.
ಸಾಲ ವಸೂಲಾತಿ ನ್ಯಾಯಮಂಡಳಿ-೧ ಬೆಂಗಳೂರಿನಲ್ಲಿ ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ನಡೆದಿದ್ದು, ಈ ಸಂದರ್ಭದಲ್ಲಿ 20 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಇದರಲ್ಲಿ 4.40 ಕೋಟಿ ರೂ. ಮೌಲ್ಯದ ಅನುತ್ಪಾದಕ ಆಸ್ತಿಯನ್ನು ಒಳಗೊಂಡ ೧೨ ಪ್ರಕರಣಗಳನ್ನು ಬ್ಯಾಂಕ್‌ಗಳು/ಹಣಕಾಸಿನ ಸಂಸ್ಥೆಗಳ ಸಂಪೂರ್ಣ ತೃಪ್ತಿಯಾಗುವ ರೀತಿಯಲ್ಲಿ ಸೌಹಾರ್ದಯುತವಾಗಿ ಇತ್ಯರ್ಥಗೊಳಿಸಲಾಗಿದೆ. ಇದರ ಅಧ್ಯಕ್ಷತೆಯನ್ನು ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಪ್ರಕಾಶ್ ಕುಮಾರ್ ಮತ್ತು ವಕೀಲ ಡಿ. ಗೋವರ್ಧನ್ (ಸದಸ್ಯರು) ವಹಿಸಿದ್ದರು. ನ್ಯಾಯಮಂಡಳಿಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಅದಾಲತ್ ಅನ್ನು ಯಶಸ್ವಿಯಾಗಿ ನಡೆಸಲು ಶ್ರದ್ಧೆಯಿಂದ ಪ್ರಯತ್ನಿಸಿದ್ದರು. ಆಯ್ದ ಬ್ಯಾಂಕ್‌ಗಳಿಗಾಗಿ ಪ್ರಸಕ್ತ ವರ್ಷದಲ್ಲಿ ಡಿಆರ್‌ಟಿ-೧ ಬೆಂಗಳೂರು ನಡೆಸಿದ ಮೊದಲ ಅದಾಲತ್ ಇದಾಗಿದ್ದು, ಬ್ಯಾಂಕ್‌ಗಳ ಕಡೆಯಿಂದ ಹಾಗೂ ಸಾಲಗಾರರಿಂದ ತಮ್ಮ ದೀರ್ಘಕಾಲದ ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಬ್ಯಾಂಕುಗಳು ಮತ್ತು ಸಾಲಗಾರರಿಂದ ವ್ಯಕ್ತವಾದ ಪ್ರತಿಕ್ರಿಯೆಯಿಂದ ಬಹಳ ಸಂತೋಷಗೊಂಡ ಸಾಲ ವಸೂಲಾತಿ ನ್ಯಾಯಮಂಡಳಿಯ ರಿಜಿಸ್ಟ್ರಾರ್ ಆರ್.ಶ್ರೀನಿವಾಸ್ ಅವರು, ನಿಯಮಿತ ಮಧ್ಯಂತರಗಳಲ್ಲಿ ಇಂತಹ ಅದಾಲತ್‌ಗಳನ್ನು ನಡೆಸುವುದನ್ನು ಮುಂದುವರಿಸಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು. ಭವಿಷ್ಯದಲ್ಲಿ ಇಂತಹ ಸೌಹಾರ್ದಯುತ ಇತ್ಯರ್ಥಕ್ಕೆ ಪರ್ಯಾಯ ಪರಿಹಾರ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಅಧ್ಯಕ್ಷರು ಬ್ಯಾಂಕುಗಳಿಗೆ ಮತ್ತು ಸಾಲಗಾರರಿಗೆ ಕರೆ ನೀಡಿದರು.