

ಮುದ್ದೇಬಿಹಾಳ: ಪೈಪೋಟಿ ಯುಗದಲ್ಲೂ ಗ್ರಾಮೀಣ ಪ್ರದೇಶದಲ್ಲಿರುವ ರೈತರ ಸಹಕಾರ, ಪ್ರೋತ್ಸಾಹದಿಂದ 2023ನೇ ಸಾಲಿನಲ್ಲಿ ನಮ್ಮ ಸಂಘ 4.39 ಲಕ್ಷ ರೂ. ಲಾಭಾಂಶ ಗಳಿಸಿದೆ ಎಂದು ಹಿರೇಮುರಾಳ ಚಂದ್ರಾಮೇಶ್ವರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಆದೇಶ ನಾಗರತ್ತಿ ಹೇಳಿದರು.
ತಾಲೂಕಿನ ಹಿರೇಮುರಾಳದ ಚಂದ್ರಾಮೇಶ್ವರ ಪತ್ತಿನ ಸಹಕಾರಿ ಸಂಘದ 12ನೇ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಶನಿವಾರ ಅವರು ಮಾತನಾಡಿದರು.
ರೈತರು ಪಡೆದುಕೊಂಡ ಸಾಲವನ್ನು ಸಕಾಲಕ್ಕೆ ಮರುಪಾವತಿಸಿದರೆ ಮಾತ್ರ ಸಹಕಾರ ಸಂಘಗಳು ಅಭಿವೃದ್ಧಿ ಸಾಧಿಸಲು ಸಾಧ್ಯವಿದೆ ಎಂದರು.
ಸಂಘದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಸ್.ಬಿ.ಕಟ್ಟಿಮನಿ ಸಂಘದ ಪ್ರಗತಿ ವರದಿ ವಾಚಿಸಿದರು. ಇದೇ ವೇಳೆ ಬ್ಯಾಂಕಿನ ಸಾಧಕ ಗ್ರಾಹಕರನ್ನು ಸನ್ಮಾನಿಸಲಾಯಿತು. ಗ್ರಾಮದ ಗಣ್ಯರಾದ ಪ್ರಸನ್ನಕುಮಾರ ಜಹಾಗೀರದಾರ, ಸಹಕಾರ ಧುರೀಣ ಶಿವಾನಂದ ಇಂಡಿ, ಸಂಘದ ಉಪಾಧ್ಯಕ್ಷ ಶಾಂತಗೌಡ ಪಾಟೀಲ, ನಿರ್ದೇಶಕರಾದ ಚಂದ್ರಶೇಖರ ನಾಗರಬೆಟ್ಟ, ಎಸ್.ಬಿ.ಕಟ್ಟಿಮನಿ, ನಿಂಗಣ್ಣ ಜಾಲವಾದಗಿ, ಮಹೆಬೂಬ ಮುಲ್ಲಾ, ನೀಲಕಂಠಪ್ಪ ಕೋಳೂರ, ಕಲ್ಲಣ್ಣ ಪ್ಯಾಟಿ, ಮಾರುತಿ ಪವಾರ, ಸುರೇಶ ಭೋವಿ, ಶಾಂತಾ ಭೋವಿ, ಪ್ರಮುಖರಾದ ಸಣ್ಣಯ್ಯ ಹಿರೇಮಠ, ಚಂದ್ರಶೇಖರ ಬಿರಾದಾರ, ಅಡಿವೆಪ್ಪ ನಾಡಗೌಡರ, ನಾಗರಾಜ ರಾಮೋಡಗಿ, ಲಾಲಸಾ ಸುರಪುರ, ಶ್ರೀಶೈಲ ಊರನ, ಗುರುಸಂಗಯ್ಯ ಹಿರೇಮಠ, ಎಂ.ಬಿ.ಗುಡಗುಂಟಿ, ಎಂ.ಎಚ್.ಹಿರೇಮನಿ, ಅಮರೇಶ ಬಾಗೇವಾಡಿ ಪಾಲ್ಗೊಂಡಿದ್ದರು.