

ತರೀಕೆರೆ: ಪುರಸಭೆಯಲ್ಲಿ ಮಂಗಳವಾರ ಅಧ್ಯಕ್ಷ ವಸಂತ್‌ಕುಮಾರ್ 2025-26ನೇ ಸಾಲಿನ 4.37 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಿದರು.
ಪಟ್ಟಣ ಹೊರವಲಯದ ಗಾಳಿಹಳ್ಳಿ ಕ್ರಾಸ್, ಹಾದಿಕೆರೆ ಇತರ ಕೊನೆಯ ಪ್ರದೇಶಗಳಲ್ಲಿ ದ್ವಾರ ಲಕ ಅಳವಡಿಸಲು 10 ಲಕ್ಷ ರೂ. ಕಾಯ್ದಿರಿಸಲಾಗಿದೆ. ಪಟ್ಟಣದ ವಿವಿಧ ಕಡೆಗಳಲ್ಲಿ ಹಸರೀಕರಣಕ್ಕೆ 5 ಲಕ್ಷ ರೂ. ಕಾಯ್ದಿರಿಸಲಾಗಿದೆ ಎಂದು ತಿಳಿಸಿದರು.
ಮೂಲ ಸೌಲಭ್ಯಗಳಿಂದ ವಂಚಿತವಾಗಿರುವ ಸರ್ಕಾರಿ ಶಾಲೆಗಳು, ಅಂಗನವಾಡಿಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶೌಚಗಹ ನಿರ್ಮಾಣ ಮತ್ತು ಕಟ್ಟಡ ದುರಸ್ತಿಗಾಗಿ 15 ಲಕ್ಷ, ಪಟ್ಟಣದಲ್ಲಿರುವ ಮೇಲ್ಮಟ್ಟದ ಜಲಸಂಗ್ರಹಗಾರಗಳನ್ನು ವೈಜ್ಞಾನಿಕವಾಗಿ ಸ್ವಚ್ಛಗೊಳಿಸಲು 11 ಲಕ್ಷ, ಬರ ಪರಿಸ್ಥಿತಿ ನಿರ್ವಹಣೆಗಾಗಿ 20 ಲಕ್ಷ ರೂ. ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು.
ಪುರಸಭಾ ನಿಧಿಯಿಂದ ಕ್ರೀಡಾ ಚಟುವಟಿಕೆಗಳಿಗಾಗಿ 2 ಲಕ್ಷ, ನೀರು ಸರಬರಾಜು, ವಿದ್ಯುತ್ ದೀಪಗಳ ನಿರ್ವಹಣೆ, ಹೊರಗುತ್ತಿಗೆ ನೌಕರರ ವೇತನ ಪಾವತಿ ಮತ್ತು ಭತ್ಯೆ, ಪೌರ ಕಾರ್ಮಿಕರಿಗೆ ಸುರಕ್ಷಾ ದಿರಿಸು, ಸಲಕರಣೆ ಹಾಗೂ ಇತರ ಆಡಳಿತಾತ್ಮಕ ವೆಚ್ಚಗಳಿಗಾಗಿ ಒಟ್ಟು 2.66 ಕೋಟಿ ರೂ. ಇರಿಸಲಾಗಿದೆ. ಪುರಸಭೆ ವ್ಯಾಪ್ತಿಯಲ್ಲಿ ಅಗತ್ಯ ಇರುವ ಕಡೆ ಸಾರ್ವಜನಿಕ ಶೌಚಗೃಹ ನಿರ್ಮಾಣ ಮಾಡಲು ಟೆಂಡರ್ ಕರೆದು ಕಾರ್ಯಾದೇಶ ನೀಡಲಾಗಿದೆ. ವೈಯಕ್ತಿಕ ಶೌಚಗಹ ನಿರ್ಮಿಸಿಕೊಳ್ಳುವವರಿಗೆ ಸಹಾಯ ಧನ ನೀಡಲು ಸರ್ಕಾರದಿಂದ ಬಿಡುಗಡೆಯಾಗಿರುವ 50 ಲಕ್ಷ ರೂ. ಕಾಯ್ದಿರಿಸಲಾಗಿದೆ ಎಂದು ವಿವರಿಸಿದರು.
ಪಟ್ಟಣದಲ್ಲಿ ಬೀದಿ ನಾಯಿಗಳ ಸಂತಾನಶಕ್ತಿ ಹರಣ ಶಸಚಿಕಿತ್ಸೆ ಮಾಡಿಸಲು 15 ಲಕ್ಷ ರೂ. ಮೀಸಲಿರಿಸಲಾಗಿದೆ. ಪಟ್ಟಣದ ಸ್ವಚ್ಛತೆಗೆ ಹೊಸದಾಗಿ ಕಸ ವಿಲೇವಾರಿ ವಾಹನ, ಯಂತ್ರೋಪಕರಣ ಖರೀದಿಗೆ 40 ಲಕ್ಷ, ನಾನ್ ಮಿಲಿಯನ್ + ಸಿಟಿ ಯೋಜನೆಯಲ್ಲಿ ಒಂದು ಸಕ್ಕಿಂಗ್ ಯಂತ್ರವುಳ್ಳ ವಾಹನ 32 ಲಕ್ಷ ರೂ. ವೆಚ್ಚದಲ್ಲಿ ಖರೀದಿಸಲಾಗುವುದು ಎಂದರು. ತ್ಯಾಜ್ಯ ನಿರ್ವಹಣೆ ಮತ್ತು ಸಂಸ್ಕರಣೆಗಾಗಿ 3 ಕೋಟಿ ರೂ. ವೆಚ್ಚದಲ್ಲಿ ಎಂಆರ್‌ಎ್ ಘಟಕ ನಿರ್ಮಿಸುವ ಯೋಜನೆ ರೂಪಿಸಲಾಗಿದ್ದು, 90 ಲಕ್ಷ ರೂ. ವಿಸತ ಯೋಜನಾ ವರದಿ ತಯಾರಿಸಲಾಗಿದೆ. ಸರ್ಕಾರದ ಅನುದಾನ ನಿರೀಕ್ಷಿಸಿ ಕಾರ್ಯನಿರ್ವಹಿಸಲಾಗುವುದು. ಮನೆ ಮನೆಗೆ ವಿತರಿಸಲು 22 ಲಕ್ಷ ರೂ.ವೆಚ್ಚದಲ್ಲಿ 18,226 ಡಸ್ಟ್‌ಬಿನ್ ಖರೀದಿಸಲಾಗಿದ್ದು, ಈ ಮೂಲಕ ಸ್ವಚ್ಛ ಭಾರತ್ ಅಭಿಯಾನದ ಮೂಲ ಉದ್ದೇಶ ಈಡೇರಿಸಲಾಗುವುದು ಎಂತು ತಿಳಿಸಿದರು.
ಮಹಿಳೆಯರು ಇತ್ತೀಚೆಗೆ ದೈನಂದಿನ ಕೆಲಸ ಕಾರ್ಯಗಳಿಗಾಗಿ ಪುರಸಭೆ ಕಚೇರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಶೌಚಗೃಹದ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ. ಹೊರ ಆವರಣದಲ್ಲಿ ತುರ್ತು ಶೌಚಗಹ ನಿರ್ಮಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಟಿ.ದಾದಾಪೀರ್ ಮನವಿ ಮಾಡಿದರು. ಕೆಲ ವಾರ್ಡುಗಳಲ್ಲಿ ಕಿರು ನೀರು ಘಟಕದ ಮೋಟಾರ್‌ಗಳು ಪದೇ ಪದೆ ಕೆಡುತ್ತಿದ್ದು, ಕೆಳ ಹಂತದ ನೌಕರರು ಇದರ ಕಡೆ ಗಮನ ಹರಿಸುವುದಿರಲಿ, ಅಧಿಕಾರಿಗಳಿಗೆ ಮಾಹಿತಿಯನ್ನೂ ನೀಡುತ್ತಿಲ್ಲ. ಎಲ್ಲವನ್ನೂ ಪುರಸಭೆ ಸದಸ್ಯರೇ ನಿಭಾಯಿಸುವಂತಾಗಿದ್ದು, ಅಧಿಕಾರಿಗಳು ನೌಕರರ ಮೇಲೆ ಹಿಡಿತ ಸಾಧಿಸಿ ಅವರಿಂದ ಕೆಲಸ ಮಾಡಿಸಬೇಕು ಎಂದು ಒತ್ತಾಯಿಸಿದರು. 17ನೇ ವಾರ್ಡ್‌ನಲ್ಲಿ ನಗರೋತ್ಥಾನ ಯೋಜನೆಯಡಿ ಅಭಿವದ್ಧಿ ಕಾಮಗಾರಿ ಕೈಗೊಂಡಿದ್ದರೂ ರಸ್ತೆಯಲ್ಲೇ ಎರಡ್ಮೂರು ಟ್ರಾೃಕ್ಟರ್‌ಗಳಷ್ಟು ಕಲ್ಲು ಮಣ್ಣು ಸುರಿದು ಜನರ ಸಂಚಾರಕ್ಕೆ ತೊಂದರೆ ಮಾಡಲಾಗಿದೆ ಎಂದು ದೂರಿದರು. 17ಮತ್ತು 20ನೇ ವಾರ್ಡುಗಳಿಗೆ ನೀರು ಪೂರೈಸುತ್ತಿದ್ದ ಕೊಳವೆ ಬಾವಿ ನಿಷ್ಕ್ರಿಯವಾಗಿ ಎರಡು ವರ್ಷ ಕಳೆದಿದೆ. ಪುರಸಭೆ ಅಧಿಕಾರಿಗಳು ಪ್ರತ್ಯೇಕ ಬೋರ್‌ವೆಲ್ ಕೊರೆಸುವ ಯೋಜನೆ ರೂಪಿಸಿಲ್ಲ. ತಕ್ಷಣವೇ ಡಿಸಿಗೆ ಪ್ರಸ್ತಾವನೆ ಸಲ್ಲಿಸಿ ಬೋರ್‌ವೆಲ್ ಕೊರೆಸಲು ಮುಂದಾಗಬೇಕು. ಈ ಮೂಲಕ ನೀರಿನ ಸಮಸ್ಯೆಗೆ ಪರಿಹಾರ ಕಂಡುಹಿಡಿಯಬೇಕು ಎಂದು ಒತ್ತಾಯಿಸಿದರು. ಟಿ.ಜಿ.ಲೋಕೇಶ್ ಮಾತನಾಡಿ, ಪುರಸಭೆ ಆದಾಯ ಸಂಗ್ರಹ ಮತ್ತು ವೆಚ್ಚವನ್ನು ಗಮನದಲ್ಲಿಟ್ಟು ಉತ್ತಮ ಆಯವ್ಯಯ ಮಂಡಿಸಿದೆ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಉಪಾಧ್ಯಕ್ಷೆ ಪಾರ್ವತಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್‌ಕುಮಾರ್, ಮುಖ್ಯಾಧಿಕಾರಿ ಎಚ್.ಪ್ರಶಾಂತ್, ವಿವಿಧ ವಾರ್ಡುಗಳ ಸದಸ್ಯರು ಇದ್ದರು.