

ಹುಬ್ಬಳ್ಳಿ: ಕಡಿಮೆ ದರದಲ್ಲಿ ಇಂಪೋರ್ಟೆಡ್ ಐಪೋನ್ ಮಾರಾಟ ಮಾಡುವ ಜಾಹೀರಾತು ನೀಡಿದ ವಂಚಕರು, ನಗರದ ಯುವಕನಿಂದ 4.35 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಕಲಕುಂಟ್ಲಾ ಜಾನ್ ಸಿಮಾನ್ ವಂಚನೆಗೆ ಒಳಗಾದವರು. ಇನ್‌ಸ್ಟಾಗ್ರಾಂ ಮೂಲಕ ಚಾಟ್ ಮಾಡಿದ ಶಿವಾಂಕ ಅಗರವಾಲ್ ಮತ್ತು ಲಕ್ಷ್ಮೀ ಎಂಬುವರು ವಂಚಿಸಿದ್ದಾರೆ.
1.03 ಲಕ್ಷ ರೂ.ಗೆ ಐಪೋನ್ 16 ಪ್ರೊಮ್ಯಾಕ್ಸ್ ಮಾರಾಟ ಮಾಡುವುದಾಗಿ ಹೇಳಿ ಮೊಬೈಲ್ ಫೋನ್ ಕಳುಹಿಸುವುದಾಗಿ 4,35,548 ರೂ. ತಮ್ಮ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ್ದರ ಕುರಿತು ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.