4.31ಲಕ್ಷ ರೂ. ಮೌಲ್ಯದ ಜೈವಿಕ ಕೀಟನಾಶಕ ವಶಕ್ಕೆ

20-SDMNOV-02
Published on

ಸೇಡಂ: ಪಟ್ಟಣ ಹಾಗೂ ಕೋಡ್ಲಾದಲ್ಲಿ ಅಕ್ರಮವಾಗಿ ಜೈವಿಕ ಕೀಟನಾಶಕಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕೃಷಿ ಇಲಾಖೆ ಅಧಿಕಾರಿಗಳ ತಂಡ ದಾಳಿ ನಡೆಸಿದ್ದಾರೆ.
ಪಟ್ಟಣದ ಸಿದ್ಧೇಶ್ವರ ಆಗ್ರೋ ಟ್ರೇಡ್ರಸ್ಸ್, ಕೋಡ್ಲಾದ ಬಸವ ಆಗ್ರೋ ಏಜೆನ್ಸಿಸ್, ವೆಂಕಟೇಶ್ವರ ಆಗ್ರೋ ಟ್ರೇಡರ್ಸ್​ ಮಳಿಗೆಗಳ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದಾಗ ಜೈವಿಕ ಕೀಟನಾಶಕಗಳಾದ ಸಿಕ್ಸರ್, ಪ್ರೋಟಾನ್, ದಮನ, ಅಶೋಕ ಸೇರಿ ಇನ್ನಿತರ ಕೀಟನಾಶಕ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಈ ಮಳಿಗೆಗಳಿಂದ ಒಟ್ಟು 4.31 ಲಕ್ಷ ರೂ. ಮೌಲ್ಯದ ಜೈವಿಕ ಕೀಟನಾಶಕ ಪರಿಕರಗಳನ್ನು ಜಪ್ತಿ ಮಾಡಿ, ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮಾರಾಟಗಾರರಿಗೆ ನೋಟಿಸ್ ಜಾರಿ ಮಾಡಿದ್ದು, ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಕೃಷಿ ಇಲಾಖೆ ಉಪ ನಿದರ್ೇಶಕ ಸಮದ್ ಪಟೇಲ್ ತಿಳಿಸಿದ್ದಾರೆ.
ಕಾಯರ್ಾಚರಣೆಯಲ್ಲಿ ಅಧಿಕಾರಿಗಳಾದ ಅನುಷಾ ಪಾಟೀಲ್, ಪ್ರಕಾಶ ರಾಠೋಡ್, ಬಸವರಾಜ ಕೊಡಸಾ, ಸಂಜೀವಕುಮಾರ, ಸತೀಶ ಆತ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net